ಡೆಲ್ಟಾದಿಂದಾಗಿ ಗಲ್ಫ್ನಲ್ಲಿ ಶುರುವಾಗಿದೆ 4ನೇ ಅಲೆ : WHO

ಶನಿವಾರ, 31 ಜುಲೈ 2021 (08:48 IST)
ವಿಶ್ವಸಂಸ್ಥೆ (ಜು.31):  ಭಾರತದಲ್ಲಿ ಮೊದಲು ಪತ್ತೆ ಆದ ರೂಪಾಂತರಿ ಡೆಲ್ಟಾವೈರಸ್ ಇದೀಗ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ 4ನೇ ಅಲೆಗೆ ಕಾರಣವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

•ಭಾರತದಲ್ಲಿ ಮೊದಲು ಪತ್ತೆ ಆದ ರೂಪಾಂತರಿ ಡೆಲ್ಟಾವೈರಸ್ನಿಂದ 4ನೇ ಅಲೆ
•ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ 4ನೇ ಅಲೆಗೆ ಕಾರಣವಾಗುತ್ತಿರುವ ವೈರಸ್
•ರೂಪಾಂತರಿ ವೈರಸ್ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವ ಆರೋಗ್ಯ ಸಂಸ್ಥೆ
 ಪಾಕಿಸ್ತಾನದಿಂದ ಮೊರಾಕ್ಕೋ ವರೆಗೆ ವಿಸ್ತರಿಸಿರುವ ಮಧ್ಯಪ್ರಾಚ್ಯದ 22 ದೇಶಗಳ ಪೈಕಿ 15 ದೇಶಗಳಲ್ಲಿ ಡೆಲ್ಟಾವೈರಸ್ ಪ್ರಕರಣಗಳು ದಾಖಲಾಗುತ್ತಿವೆ. ಹೆಚ್ಚಿನ ಹೊಸ ಪ್ರಕರಣಗಳು ಮತ್ತು ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳು ಲಸಿಕೆ ಪಡೆಯದೇ ಇರುವವರಾಗಿದ್ದಾರೆ. ನಾವು ಈಗ ನಾಲ್ಕನೇ ಅಲೆಯ ಆರಂಭದಲ್ಲಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಧ್ಯಪ್ರಾಚ್ಯ ಪ್ರದೇಶಗಳ ನಿರ್ದೇಶಕ ಅಹಮದ್ ಅಲ್ ಮಂಧಾರಿ ಹೇಳಿದ್ದಾರೆ.
ಕಳೆದ ವಾರದ ವರೆಗೆ ಮಧ್ಯಪ್ರಾಚ್ಯ ದೇಶಗಳ ಕೇವಲ 4.1 ಕೋಟಿ ಮಂದಿ ಅಂದರೆ ಒಟ್ಟು ಜನಸಂಖ್ಯೆಯ ಶೇ.5.5ರಷ್ಟುಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಕಳೆದ ತಿಂಗಳಿಗೆ ಹೋಲಿಸಿದರೆ ಸೋಂಕು ಶೇ.55ರಷ್ಟುಏರಿಕೆ ಆಗಿದೆ. ಸಾವಿನ ಪ್ರಮಾಣ ಶೇ.15ರಷ್ಟುಏರಿಕೆ ಆಗಿದೆ. 3.10 ಲಕ್ಷಕ್ಕೂ ಅಧಿಕ ಕೇಸ್ಗಳು ಪತ್ತೆ ಆಗಿವೆ.
ವಾರಕ್ಕೆ 3500 ಸಾವುಗಳು ಸಂಭವಿಸುತ್ತಿವೆ. ಉತ್ತರ ಆಫ್ರಿಕಾದ ಟ್ಯುನೇಷಿಯಾದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಸಾವು ಸಂಭವಿಸಿದ್ದು, ಸೋಂಕು ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಆಮ್ಲಜನಕ ಸಿಲಿಂಡರ್ ಹಾಗೂ ಐಸಿಯು ಬೆಡ್ಗಳ ಕೊರತೆ ಉಂಟಾಗುತ್ತಿದೆ. ಡೆಲ್ಟಾವೈರಸ್ ವ್ಯಾಪಕವಾಗಿ ಹರಡುತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ