ರಾಜ್ಯಾದ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ

ಬುಧವಾರ, 15 ಮಾರ್ಚ್ 2023 (13:19 IST)
ಬೆಂಗಳೂರು :  ಯುಗಾದಿ ಹಬ್ಬಕ್ಕೂ ಮುನ್ನಾ ದಿನ ಅಂದ್ರೆ ಮಾರ್ಚ್ 21ರಂದು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿದೆ. ಮಾಚ್ 21ರಂದು ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭವಾಗಲಿದೆ ಎಂದು ರಾಜ್ಯ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ್ ಸುಬ್ಬಾರಾವ್ ತಿಳಿಸಿದ್ದಾರೆ. 

ಸರ್ಕಾರಿ ನೌಕರರ ಪ್ರತಿಭಟನೆ ನಡೆದಾಗ ಶೇ.17 ವೇತನ ಹೆಚ್ಚಳ ಮಾಡಿದ್ರು. ಆದ್ರೆ ನಮಗೆ ಇನ್ನೂ ವೇತನ ಹೆಚ್ಚಳದ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಸಾರಿಗೆ ಇಲಾಖೆ ಆಡಳಿತ ಮಂಡಳಿ ಬೇಡಿಕೆಗಳನ್ನೆಲ್ಲಾ ಮುಖ್ಯಮಂತ್ರಿಗಳ ಅಂಗಳಕ್ಕೆ ಹಾಕಿಬಿಟ್ಟಿದ್ದಾರೆ.

ಇದರಿಂದ ಏನೇ ದುಷ್ಪರಿಣಾಮ ಆದರೂ ನೇರವಾಗಿ ಅವರೇ ಹೊಣೆಯಾಗುತ್ತಾರೆ ಎನ್ನುವಂತೆ ಮಾಡಿದೆ. ಈವರೆಗೆ ಪ್ರತಿಕ್ರಿಯಿಸದೇ ಇರುವುದರಿಂದ ಮುಷ್ಕರಕ್ಕೆ ಕರೆ ನೀಡುತ್ತಿದ್ದೇವೆ. ಜನ ನಮ್ಮನ್ನ ಕ್ಷಮಿಸಬೇಕು. ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ