ಸರ್ಕಾರಿ ನೌಕರರಿಗೆ ಮಧ್ಯಂತರ ರಿಲೀಫ್

ಗುರುವಾರ, 2 ಮಾರ್ಚ್ 2023 (06:18 IST)
ಬೆಂಗಳೂರು : ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಆರಂಭಿಸಿದ್ದ ಮುಷ್ಕರಕ್ಕೆ ಬೆಚ್ಚಿದ ರಾಜ್ಯ ಸರ್ಕಾರ ಮಧ್ಯಾಹ್ನ ಮಧ್ಯಂತರ ಪರಿಹಾರ ಕಂಡುಕೊಂಡಿದೆ.
 
ಸರ್ಕಾರ ತನ್ನ ನೌಕರರ ವೇತನವನ್ನು ಶೇ.17ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ನೌಕರರು ಮುಷ್ಕರ ಕೈಬಿಟ್ಟಿದ್ದಾರೆ.

ಸಿಎಂ ಬೊಮ್ಮಾಯಿ ಜೊತೆಗಿನ ಹಲವು ಸುತ್ತುಗಳ ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ನಮ್ಮ ಹೋರಾಟ ಯಶಸ್ವಿಯಾಗಿದೆ.

ಸರ್ಕಾರಕ್ಕೆ ಧನ್ಯವಾದ ಎಂದು ತಿಳಿಸಿದರು. ಏಳನೇ ವೇತನ ಆಯೋಗ ಇನ್ನೂ ವರದಿ ನೀಡಿಲ್ಲ. ಹೀಗಾಗಿ ಅಂತಿಮ ವರದಿಯನ್ನು ಕಾಯ್ದಿರಿಸಿರುವ ರಾಜ್ಯ ಸರ್ಕಾರ, ನೌಕರರಿಗೆ ಮಧ್ಯಂತರ ಪರಿಹಾರದ ರೂಪವಾಗಿ ಶೇ.17ರಷ್ಟು ವೇತನ ಹೆಚ್ಚಳ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ