ಬಾಲಕರೇ ಮೇಲುಗೈ : ಸಿಇಟಿ ಫಲಿತಾಂಶ ಪ್ರಕಟ

ಶನಿವಾರ, 30 ಜುಲೈ 2022 (12:11 IST)
ಬೆಂಗಳೂರು : 2021-22ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಸೀಟು ಹಂಚಿಕೆಗೆ ನಡೆದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

2021-22ನೇ ಸಾಲಿನ ವೃತ್ತಿಪರ ಕೋರ್ಸ್ ಗಳ ಸೀಟು ಹಂಚಿಕೆಗೆ ನಡೆದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಇಂದು ಕೆಇಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಿದರು.

ಸಿಇಟಿ ಪರೀಕ್ಷೆಗೆ ಸುಮಾರು 2.16 ಲಕ್ಷ ವಿದ್ಯಾರ್ಥಿಗಳು ನೋಂದಣಿ ಆಗಿದ್ದರು. ಈ ಪೈಕಿ 2.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಎಂಜಿನಿಯರ್ ಗೆ – 1,71,656 ರ್ಯಾಂಕ್, ಕೃಷಿ ಕೋರ್ಸ್ ಗೆ 1,39,968 ರ್ಯಾಂಕ್, ಪಶುಸಂಗೋಪನೆ ಕೋರ್ಸ್ ಗೆ 1,42,820 ರ್ಯಾಂಕ್, ಯೋಗ ಮತ್ತು ನ್ಯಾಚುರೋಪತಿಗೆ 1,42,750 ರ್ಯಾಂಕ್ ಮತ್ತು ಬಿ ಫಾರ್ಮ್ ಗೆ 1,74,568 ರ್ಯಾಂಕ್ ನೀಡಲಾಗಿದೆ. ವಿಶೇಷ ಅಂದ್ರೆ 5 ಕೋರ್ಸ್ನ ಟಾಪ್ 9 ರ್ಯಾಂಕ್ಗಳನ್ನು ಬಹುತೇಕ ಬೆಂಗಳೂರಿನ ವಿದ್ಯಾರ್ಥಿಗಳು ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ