ಕಾಶ್ಮೀರದಲ್ಲಿ ಮುಸ್ಲಿಮರೇ ಸಿಎಂ ಯಾಕೆ ಆಗಬೇಕು? ಹಿಂದೂಗಳು ಸಿಎಂ ಆಗಲಿ: ಸುಬ್ರಮಣಿಯನ್ ಸ್ವಾಮಿ

ಮಂಗಳವಾರ, 10 ಜುಲೈ 2018 (09:12 IST)
ನವದೆಹಲಿ: ಕಾಶ್ಮೀರದಲ್ಲಿ ಯಾವಾಗಲೂ ಮುಸ್ಲಿಮರೇ ಮುಖ್ಯಮಂತ್ರಿಯಾಗುವುದನ್ನು ಸಹಿಸಲಾಗದು. ಹಿಂದೂ ಧರ್ಮೀಯರು ಮುಖ್ಯಮಂತ್ರಿಯಾಗಲಿ.. ಹೀಗಂತ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
 

ಕಾಶ್ಮೀರದಲ್ಲಿ ಮುಸ್ಲಿಮರೇ ಸಿಎಂ ಆಗುವುದಕ್ಕೆ ಕಾರಣ ಜವಹರಲಾಲ್ ನೆಹರೂ ಎಂದು ಆರೋಪಿಸಿರುವ ಸುಬ್ರಮಣಿಯನ್ ಸ್ವಾಮಿ, ಈ ಬಾರಿಯಾದರೂ ಹಿಂದೂ ವ್ಯಕ್ತಿ ಸಿಎಂ ಆಗಲಿ ಎಂದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸುಬ್ರಮಣಿಯನ್ ಸ್ವಾಮಿ ಆರ್ಥಿಕ ಬೆಳವಣಿಗೆಯೊಂದೇ ಬಿಜೆಪಿಗೆ ಮತ ತಂದುಕೊಡದು. ಹಿಂದುತ್ವದಿಂದ ಮತ ಸೆಳೆಯಬಹುದು. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದ್ದಕ್ಕೆ ಜನರು ಅಷ್ಟೊಂದು ಸೀಟ್ ಗೆಲ್ಲಿಸಿಕೊಟ್ಟರು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ