ಪ್ರಳಯ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ!
ಪ್ರಳಯ್ ಒಂದು ಅರೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಮುದ್ರ ಅಥವಾ ನೆಲದ ಮೂಲಕ ಉಡಾಯಿಸಬಹುದಾಗಿದೆ. ಇದು ನಿರ್ಧಿಷ್ಟ ದೂರ ಕ್ರಮಿಸಿದ ಬಳಿಕ ತನ್ನ ಮಾರ್ಗವನ್ನು ಬದಲಾಯಿಸಿ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.
ಪ್ರಳಯ್ 250 ರಿಂದ 500 ಕಿಮೀ ದೂರದಲ್ಲಿರುವ ಗುರಿಯನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 500 ರಿಂದ 1,000 ಕೆಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವ ಕ್ಷಿಪಣಿಯನ್ನು ಮೊಬೈಲ್ ಲಾಂಚರ್ ಮೂಲಕವೂ ಉಡಾವಣೆ ಮಾಡಬಹುದಾಗಿದೆ. ಈ ಕ್ಷಿಪಣಿಯನ್ನು ಅತ್ಯಾಧುನಿಕ ನ್ಯಾವಿಗೇಶನ್ ಸಿಸ್ಟಮ್ ಬಳಸಿ ಅಭಿವೃದ್ಧಿ ಪಡಿಸಲಾಗಿದೆ.