ವಂಚನೆ ಪ್ರಕರಣ: ಸೂಪರ್ ಸ್ಟಾರ್ ರಜನೀಕಾಂತ್ ಪತ್ನಿ ಲತಾ ವಿಚಾರಣೆ ಇಂದು
ಈ ಪ್ರಕರಣವನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಹೊಸ ಆದೇಶ ನೀಡಿದೆ. ರಜನಿ-ದೀಪಿಕಾ ಪಡುಕೋಣೆ ಅಭಿನಯದ ಕೊಚಾಡಿಯನ್ ಸಿನಿಮಾದ ಜಾಹೀರಾತಿಗಾಗಿ ಬೆಂಗಳೂರು ಮೂಲದ ಜಾಹೀರಾತು ಸಂಸ್ಥೆಗೆ ಹಣ ಪಾವತಿ ಮಾಡದೇ ಲತಾ ಮೋಸ ಮಾಡಿದ್ದರು ಎನ್ನಲಾಗಿದೆ. ಆದರೆ ಕರ್ನಾಟಕ ಹೈಕೋರ್ಟ್ ಇದು ವಂಚನೆ ಪ್ರಕರಣವಲ್ಲ, ಒಪ್ಪಂದ ಮುರಿಯಲಾಗಿದೆಯಷ್ಟೇ ಎಂದು ವಂಚನೆ ಪ್ರಕರಣವನ್ನು ಕೈ ಬಿಟ್ಟಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.