ನಾಳೆಯೇ ಯಡಿಯೂರಪ್ಪ ಸರ್ಕಾರದ ವಿಶ್ವಾಸ ಮತ: ಸುಪ್ರೀಂ ಕೋರ್ಟ್ ತೀರ್ಪು
ಶುಕ್ರವಾರ, 18 ಮೇ 2018 (11:09 IST)
ನವದೆಹಲಿ: ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದ ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ನಾಳೆಯೇ ವಿಶ್ವಾಸಮತ ಯಾಚನೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ನಾಳೆಯೇ ವಿಶ್ವಾಸ ಮತ ಯಾಚನೆ ಮಾಡಬೇಕು. ಕಾಲವಕಾಶ ನೀಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದೆ.
ಇದರಿಂದಾಗಿ ಕರ್ನಾಟಕದ ರಾಜಕೀಯ ವಿದ್ಯಮಾನ ನಾಳೆ ವಿಧಾನಸೌಧಕ್ಕೆ ಶಿಫ್ಟ್ ಆಗಲಿದೆ. ಹೀಗಾದಲ್ಲಿ ರೆಸಾರ್ಟ್ ಗೆ ತೆರಳಲಿರುವ ಶಾಸಕರು ತಕ್ಷಣವೇ ರಾಜ್ಯಕ್ಕೆ ಮರಳಬೇಕಾಗಬಹುದು. ಯಾರಿಗೂ ಸಮಯಾವಕಾಶ ನೀಡಲು ಸಾಧ‍್ಯವಿಲ್ಲ ಎಂದ ಸುಪ್ರೀಂ ಕೋರ್ಟ್, ಯಾರು ಸರ್ಕಾರ ರಚಿಸಬೇಕು ಎಂಬ ಬಗ್ಗೆ ಏನನ್ನೂ ಹೇಳದೇ ವಿಶ್ವಾಸ ಮತ ಯಾಚನೆಗೆ ಆದೇಶಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.