ಟೋಲ್ ಸಂಗ್ರಹ ಪ್ರಾರಂಭದಲ್ಲೇ ತಾಂತ್ರಿಕ ದೋಷ?

ಮಂಗಳವಾರ, 14 ಮಾರ್ಚ್ 2023 (09:26 IST)
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಂಡಿದ್ದು ಮಂಗಳವಾರದಿಂದ ಟೋಲ್ ಸಂಗ್ರಹವೂ ಪ್ರಾರಂಭವಾಗಿದೆ.


ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ ಕಂಡುಬಂದಿದೆ. ಇದರಿಂದ ವಾಹನ ಸವಾರರು ಬೆಳಗ್ಗೆಯಿಂದಲೇ ಪರದಾಡುವಂತಾಗಿದೆ.

ಮಂಗಳವಾರ ಕಣಮಿಣಕಿ ಟೋಲ್ನಲ್ಲಿ ಆರಂಭದಲ್ಲೇ ತಾಂತ್ರಿಕ ದೋಷ ಕಂಡುಬಂದಿದೆ. ಫಾಸ್ಟ್ ಟ್ಯಾಗ್ ಅಳವಡಿಸಲಾಗಿದ್ದರೂ ಅವು ಕಾರ್ಯನಿರ್ವಹಿಸುತ್ತಿಲ್ಲ. ಕೆಲ ಬೂತ್ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ವಾಹನ ಸವಾರರು ಪರದಾಡಿದ್ದಾರೆ. ಅತ್ತ ಫಾಸ್ಟ್ ಟ್ಯಾಗ್ ಇಲ್ಲದೇ ಹೋದ ವಾಹನ ಸವಾರರು ಅದರ ದುಪ್ಪಟ್ಟು ದರವನ್ನು ಕಟ್ಟಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ