ಕೈಗಾರಿಕಾ ವಿಸ್ತರಣೆ ಮತ್ತು ಅರಣ್ಯ ನಾಶದಿಂದ ಅರಣ್ಯವಾಸಿಗಳಿಗೆ ನೆಲೆಯಿಲ್ಲದಂತಾಗಿದೆ. ಅವುಗಳು ಜನ ವಸತಿ ಪ್ರದೇಶದತ್ತ ದಾಪುಗಾಲಿಡಲು ಮುಂದಾಗಿವೆ. ಪ್ರಾಣಿಗಳು ಅರಣ್ಯವನ್ನು ಬಿಟ್ಟು ನಾಡಿಗೆ ಬರ್ತಿವೆ. ಅವುಗಳು ಆಹಾರಕ್ಕಾಗಿ ಹೀಗೆ ನಾಟಿನತ್ತ ಲಗ್ಗೆ ಇಡ್ತಿದ್ದು, ಜೀವ ಹಾನಿಯೂ ಸಂಭಂವಿಸುತ್ತಿದೆ. ಇಲ್ಲೊಂದು ಆನೆ ರಸ್ತೆ ಪಕ್ಕದಲ್ಲಿ ನಿಂತು ಟೋಲ್ ಕಲೆಕ್ಟ್ ಮಾಡ್ತಿದೆ. ಅರ್ಥಾತ್ ಈ ರಸ್ತೆಯಲ್ಲಿ ಬರುವ ಕಬ್ಬಿನ ಲಾರಿಯನ್ನು ತಡೆದು, ಹೊಟ್ಟೆ ತುಂಬ ಕಬ್ಬು ಸವಿಯುತ್ತಿದೆ.. ಲಾರಿ ಡ್ರೈವರ್ ಸಹ ನಿಂತು ಆನೆಗೆ ಕಬ್ಬು ನೀಡಿ ತೆರಳ್ತಿದ್ದಾನೆ.. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗ್ತಿದೆ.