ನುಚ್ಚಕ್ಕಿ ರಫ್ತನ್ನು ನಿಷೇಧಿಸಿದ ಕೇಂದ್ರ!?

ಶನಿವಾರ, 10 ಸೆಪ್ಟಂಬರ್ 2022 (14:39 IST)
ನವದೆಹಲಿ : ಕೇಂದ್ರ ಸರ್ಕಾರ ಆಹಾರದ ಬೆಲೆ ಏರಿಕೆಯನ್ನು ನಿಯಂತ್ರಿಸುವ ಹಿನ್ನೆಲೆ ಕಳೆದ ತಿಂಗಳು ಗೋಧಿಯ ರಫ್ತನ್ನು ನಿಷೇಧಿಸಿತ್ತು. ಇದೀಗ ಸರ್ಕಾರ ನುಚ್ಚಕ್ಕಿಯ ರಫ್ತನ್ನೂ ನಿಷೇಧಿಸಿದೆ.
 
ಕೇಂದ್ರ ಸರ್ಕಾರ ನುಚ್ಚಕ್ಕಿ ಮೇಲಿನ ರಫ್ತನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿದೆ. ಆದರೆ ಈಗಾಗಲೇ ಹಡಗುಗಳಲ್ಲಿ ತುಂಬಿ, ರಫ್ತಿಗೆ ಹೊರಟಿರುವ ಅಕ್ಕಿಯನ್ನು ಸೆಪ್ಟೆಂಬರ್ 15ರ ವರೆಗೆ ಸಾಗಿಸಲು ಅನುಮತಿ ನೀಡುವುದಾಗಿ ವಿದೇಶೀ ವ್ಯಾಪಾರದ ಮಹಾನಿರ್ದೇಶನಾಲಯ ತಿಳಿಸಿದೆ.

ಈ ವರ್ಷ ಭತ್ತದ ನಾಟಿ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಅಕ್ಕಿಯ ಬೆಲೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಬಾಸ್ಮತಿ ಹೊರತುಪಡಿಸಿ ಇತರ ಅಕ್ಕಿಗಳ ಮೇಲೆ ಶೇ. 20ರಷ್ಟು ರಫ್ತು ಸುಂಕ ಹೆಚ್ಚಿಸಲಾಗಿತ್ತು. ಇದೀಗ ಸರ್ಕಾರ ನುಚ್ಚಕ್ಕಿ ರಫ್ತನ್ನು ನಿಷೇಧಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ