ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಕೇಂದ್ರಿಯ ವಿದ್ಯಾಲಯಗಳಲ್ಲಿ ಹಿಜಬ್ಗೆ ಅವಕಾಶ ನೀಡಿದೆ. ಈವರೆಗೂ ಕೇಂದ್ರೀಯ ವಿದ್ಯಾನಿಲಯಗಳಲ್ಲಿ ನಿಯಮ ಬದಲಿಸಿಲ್ಲ.
ಸಿಖ್ರಿಗೆ ಸಮವಸ್ತ್ರದ ಬಣ್ಣ ಟರ್ಬೈನ್ಗೆ ಅವಕಾಶ ನೀಡಿದೆ. ಅದೇ ರೀತಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಬಣ್ಣದ ಹಿಜಬ್ ಧರಿಸಲು ಅವಕಾಶ ನೀಡಿದೆ. ರಾಜ್ಯಗಳಲ್ಲಿ ಮಾತ್ರ ಹಿಜಬ್ಗೆ ಅವಕಾಶ ಯಾಕಿಲ್ಲ ಎಂದರು.
ಇದಕ್ಕೆ ಪೂರಕವಾಗಿ ಹಳೆ ಸುಪ್ರೀಂಕೋರ್ಟ್ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ ಕಾಮತ್, ಬಿಜೋಯ್ ಇಮ್ಯಾನುವೆಲ್ ಪ್ರಕರಣದಲ್ಲಿ ವಿದ್ಯಾರ್ಥಿಗಳು ಧರ್ಮವನ್ನು ಮನೆಯಲ್ಲಿಯೇ ಬಿಟ್ಟು ಶಾಲೆಗೆ ಹೋಗಬೇಕು ಎಂಬ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಲು ಇಷ್ಟಪಡದ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್ ಈ ಆದೇಶ ನೀಡಿತ್ತು. ರಾಷ್ಟ್ರಗೀತೆ ಹಾಡದಿದ್ದರೇ ದೇಶದ್ರೋಹವಲ್ಲ, ಆದರೆ ರಾಷ್ಟ್ರಗೀತೆಯ ವೇಳೆ ಎದ್ದು ನಿಲ್ಲಬೇಕು ಎಂದು ಕೋರ್ಟ್ ಹೇಳಿತ್ತು.
ಈ ಆದೇಶ ಪ್ರಕಾರ ಧಾರ್ಮಿಕ ನಂಬಿಕೆಗಳನ್ನು ಶಾಲೆಯಲ್ಲಿ ಪಾಲಿಸಬಹುದು. ಈ ಆದೇಶದ ಅನ್ವಯ ಶಾಲೆಯಲ್ಲಿ ವಿದ್ಯಾರ್ಥಿನಿಯರು ಧಾರ್ಮಿಕ ನಂಬಿಕೆ ಪಾಲಿಸಬಹುದು ಎಂದರು.