ಯುದ್ಧದ ಎಫೆಕ್ಟ್ ಅಗತ್ಯವಸ್ತುಗಳ ಬೆಲೆ ದುಬಾರಿ!

ಭಾನುವಾರ, 6 ಮಾರ್ಚ್ 2022 (10:25 IST)
ನವದೆಹಲಿ : ಉಕ್ರೇನ್ ಮೇಲಿನ ರಷ್ಯಾ ಯುದ್ಧ ಭಾರತ ಆರ್ಥಿಕತೆ ಮೇಲೆಯೂ ಭಾರೀ ಪರಿಣಾಮ ಬೀರಲು ಶುರು ಮಾಡಿದೆ.
ಅಗತ್ಯವಸ್ತುಗಳ ಬೆಲೆಗಳು ಮತ್ತೆ ಗಗನಮುಖಿಯಾಗತೊಡಗಿವೆ. ದೇಶದಲ್ಲಿ ಖಾದ್ಯ ತೈಲಗಳ ಬೆಲೆ ಮತ್ತೆ ದಾಖಲೆ ಮಟ್ಟಕ್ಕೆ ಏರುತ್ತಿವೆ. ಒಂದು ವಾರದೊಳಗೆ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆ ಬೆಲೆ ಒಂದೇ ಸಾರಿ 40 ರೂ. ಹೆಚ್ಚಿದೆ.

ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಬಹುದು ಎಂಬ ಆತಂಕವನ್ನು ವ್ಯಾಪಾರಿಗಳು ಹೊರಹಾಕಿದ್ದಾರೆ. ಆದ್ರೇ ಕೇಂದ್ರ ಮಾತ್ರ ಆ ರೀತಿ ಏನು ಆಗುವುದಿಲ್ಲ ಹೇಳುತ್ತಿದೆ. ಇದಷ್ಟೇ ಅಲ್ಲ, ಗೋಧಿ, ಬೆಳೆ, ಕಾಳುಗಳ ಬೆಲೆಯೂ ಸಿಕ್ಕಾಪಟ್ಟೆ ಹೆಚ್ಚುತ್ತಿದೆ.

ಚಿನ್ನ, ಬೆಳ್ಳಿ, ಸಿಮೆಂಟ್, ಕಬ್ಬಿಣದ ಬೆಲೆಯೂ ಹಿಗ್ಗಾಮುಗ್ಗಾ ಹೆಚ್ಚುತ್ತಿದೆ. ಇನ್ನೆರಡು ದಿನಗಳಲ್ಲಿ ಪೆಟ್ರೊಲ್, ಡೀಸೆಲ್ ಬೆಲೆಯೂ ದುಬಾರಿ ಆಗಲಿದ್ದು, ಆಗ ಇನ್ನೆಷ್ಟು ಹೆಚ್ಚಾಗಲಿದೆ? ಸೆಮಿ ಕಂಡಕ್ಟರ್ಗಳಿಗೆ ಬಳಸುವ ಲೋಹದ ಕೊರತೆ ಎದುರಾಗ್ತಿರೋದ್ರಿಂದ ಮುಂದಿನ ದಿನಗಳಲ್ಲಿ ಮೊಬೈಲ್ ಫೋನ್, ವಾಹನ, ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ದುಬಾರಿ ಆಗಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ