ರಷ್ಯಾ ಟಿವಿ ಚಾನೆಲ್ ಸಿಬ್ಬಂದಿಗಳ ರಾಜೀನಾಮೆ
ʼಯುದ್ಧ ಬೇಡʼ ಎಂಬ ಶೀರ್ಷಿಕೆಯಡಿ ಸುದ್ದಿಯನ್ನು ಕೊನೆಯದಾಗಿ ಪ್ರಸಾರ ಮಾಡಿ ಎಲ್ಲರೂ ಲೈವ್ನಲ್ಲೇ ರಾಜೀನಾಮೆ ನೀಡಿ ಕಚೇರಿಯಿಂದ ಹೊರನಡೆದಿದ್ದಾರೆ. ಉಕ್ರೇನ್ ವಿರುದ್ಧದ ರಷ್ಯಾ ಯುದ್ಧವನ್ನು ಪ್ರಸಾರ ಮಾಡದಂತೆ ರಷ್ಯಾ ಅಧಿಕಾರಿಗಳು ಸ್ಥಗಿತಗೊಳಿಸಿದ್ದರಿಂದ ಸಿಬ್ಬಂದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಸುದ್ದಿ ವಾಹಿನಿಯ ಸಂಸ್ಥಾಪಕ ನಟಾಲಿಯಾ ಸಿಂಡೇವಾ ಈ ಕುರಿತು ಪ್ರತಿಕ್ರಿಯಿಸಿದ್ದು, ʼಯುದ್ಧ ಬೇಡʼ ಎಂಬ ಸುದ್ದಿಯನ್ನು ಕೊನೆಯದಾಗಿ ಪ್ರಸಾರ ಮಾಡಿ ಎಲ್ಲಾ ಸಿಬ್ಬಂದಿ ಸಾಮೂಹಿಕವಾಗಿ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಅನಿರ್ದಿಷ್ಟಾವಧಿವರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.