2 ಸಾವಿರ ಉಕ್ರೇನ್ ನಾಗರಿಕರು ಸಾವು!

ಗುರುವಾರ, 3 ಮಾರ್ಚ್ 2022 (11:59 IST)
ಕೀವ್ : ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಮುಂದುವರಿದಿದ್ದು, ದಾಳಿಗೆ ಉಕ್ರೇನ್ನಲ್ಲಿ ಇದುವರೆಗೆ 2 ಸಾವಿರ ನಾಗರಿಕರು ಬಲಿಯಾಗಿದ್ದಾರೆ.

ರಷ್ಯಾ ಯುದ್ಧದಿಂದಾಗಿ ಉಕ್ರೇನ್ನಲ್ಲಿ ನೂರಾರು ಸಂಖ್ಯೆಯಲ್ಲಿ ಸಾರಿಗೆ ವ್ಯವಸ್ಥೆ, ಆಸ್ಪತ್ರೆಗಳು, ಮನೆಗಳು, ಕಿಂಡರ್ಗಾರ್ಡನ್ಸ್ ನಾಶವಾಗಿವೆ ಎಂದು ಉಕ್ರೇನ್ನ ತುರ್ತು ಸೇವಾ ವಿಭಾಗ ತಿಳಿಸಿದೆ.

ಪ್ರತಿ ಗಂಟೆಗೆ ಮಕ್ಕಳು, ಮಹಿಳೆಯರು, ರಕ್ಷಣಾ ಪಡೆ ಸಿಬ್ಬಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ರಷ್ಯಾ ದಾಳಿಗೆ ಪ್ರತಿ ದಾಳಿ ನಡೆಸುತ್ತಿದ್ದು, ಇದುವರೆಗೆ ರಷ್ಯಾದ 6 ಸಾವಿರ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

ರಷ್ಯಾದ ನಿರಂತರ ಶೆಲ್, ಕ್ಷಿಪಣಿ ದಾಳಿಗಳಿಂದಾಗಿ ಉಕ್ರೇನ್ನ ಬೃಹತ್ ಕಟ್ಟಡಗಳು ಧರೆಗುರುಳಿವೆ. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದೆ. ಯುದ್ಧಪೀಡತ ಪ್ರದೇಶಗಳಲ್ಲಿ ಅಭದ್ರತೆ ಭೀತಿ ಹೆಚ್ಚಾಗಿದ್ದು, ಉಕ್ರೇನಿಯನ್ ಜನತೆಗೆ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ