ಅತಿ ಹೆಚ್ಚು ಲಸಿಕೆ ನೀಡಿರುವ ರಾಜ್ಯದ ಮೊದಲ ಕ್ಷೇತ್ರ

ಶುಕ್ರವಾರ, 1 ಅಕ್ಟೋಬರ್ 2021 (08:56 IST)
ಮೈಸೂರು : ಕೆ.ಆರ್. ಕ್ಷೇತ್ರದಲ್ಲಿ ಶೇಕಡಾ 100ರಷ್ಟು ಲಸಿಕೆ ನೀಡಲಾಗಿದೆ. ಅತಿ ಹೆಚ್ಚು ಕೊವಿಡ್ ಲಸಿಕೆ ಈ ಕ್ಷೇತ್ರದಲ್ಲಿ ನೀಡಲಾಗಿದೆ. ಶಾಸಕ ರಾಮದಾಸ್ ನೇತೃತ್ವದಲ್ಲಿ ಲಸಿಕಾ ಅಭಿಯಾನ ನಡೆಸಲಾಗಿದೆ.

ಅಭಿಯಾನಕ್ಕೆ ಹಲವು ಸಂಘ ಸಂಸ್ಥೆಗಳು ಸಾಥ್ ನೀಡಿವೆ ಎಂದು ಮೈಸೂರಿನಲ್ಲಿ ಆರೋಗ್ಯ ಸಚಿವ ಸುಧಾಕರ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಶೇಕಡಾ 80ರಷ್ಟು ಲಸಿಕೆ ನೀಡಲಾಗಿದೆ. ಮೈಸೂರಿನ ಕೆ.ಆರ್. ಕ್ಷೇತ್ರದಲ್ಲಿ ಶೇಕಡಾ 100 ಲಸಿಕೆ ನೀಡಿಕೆ ಆಗಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲೇ ಮೊದಲ ಅತಿ ಹೆಚ್ಚು ಲಸಿಕೆ ಕ್ಷೇತ್ರ ಕೆ.ಆರ್.ಕ್ಷೇತ್ರ. ಶಾಸಕ ರಾಮದಾಸ್ ನೇತೃತ್ವದಲ್ಲಿ ಬೃಹತ್ ಲಸಿಕಾ ಅಭಿಯಾನ ನಡೆದಿದೆ. ಇದಕ್ಕೆ ಹಲವು ಸಂಘ ಸಂಸ್ಥೆಗಳು ಕೂಡ ಸಹಕಾರ ನೀಡಿವೆ. ರಾಜ್ಯದಲ್ಲಿಯು ಕೂಡ ಶೇ.80 ರಷ್ಟು ಲಸಿಕೆ ಆಗಿದೆ. ಆದರೆ ಕೆಲ ಗ್ರಾಮ, ಗುಡ್ಡಗಾಡು ಪ್ರದೇಶದಲ್ಲಿ ಲಸಿಕೆ ಅಭಿಯಾನ ಆಗಬೇಕಿದೆ. ಅಲ್ಲಿ ಜನರು ಮುಂದೆ ಬಂದು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೂ ಲಸಿಕೆ ಅರಿವು ಮೂಡಿಸಿ ಲಸಿಕೆ ನೀಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ರಾಮದಾಸ್ಗೆ ಮಂತ್ರಿಯಾಗುವ ಎಲ್ಲ ಅರ್ಹತೆ ಇದೆ. ಆದರೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷ ನಿರ್ಧರಿಸುತ್ತೆ. ರಾಮದಾಸ್ ಮಾರ್ಗದರ್ಶನದಲ್ಲಿ ದಸರಾ ನಡೆಯುತ್ತೆ. ಇದರಲ್ಲಿ ಬೇರೆ ವಿಶೇಷವಾದ ಅರ್ಥ ಏನೂ ಇಲ್ಲ. ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಹಿರಿಯರಿದ್ದಾರೆ. ಹೀಗಾಗಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಡಾ. ಸುಧಾಕರ್ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ