ಕಾದಿದೆಯ ಗಂಡಾಂತರ..?

ಸೋಮವಾರ, 2 ಆಗಸ್ಟ್ 2021 (16:45 IST)
ಬೆಂಗಳೂರು(ಆ.02): ಕಳೆದೊಂದು ವಾರದಿಂದ ರಾಜ್ಯ ಸೇರಿದಂತೆ ಇಡೀ ದೇಶದಾದ್ಯಂತ ವರುಣಾರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಹಲವೆಡೆ ಸಾಕಷ್ಟು ಅನಾಹುತಗಳಾಗಿವೆ. ಕಳೆದ ತಿಂಗಳು ಉತ್ತರ ಭಾರತದಲ್ಲಿ ಸುರಿದ ಭಾರೀ ಮಳೆಗೆ ಜಲಪ್ರಳಯವೇ ಅಗಿತ್ತು.

ಹಿಮಾಲಯ ಪ್ರದೇಶ, ಮೇಘಾಲಯಗಳಲ್ಲಿ ಗುಡ್ಡ ಕುಸಿತ, ಮನೆ ಕುಸಿತವಾಗಿ ಕಣೆವೆ ರಾಜ್ಯಗಳು ತತ್ತರಿಸಿ ಹೋಗಿತ್ತು. ದಕ್ಷಿಣ ಭಾರತದಲ್ಲಿಯೂ ಆಗಿರುವ ಅನಾಹುತಗಳು ಕಡಿಮೆಯೇನಲ್ಲ. ಮಹಾರಾಷ್ಟದಲ್ಲಿ ಸುರಿದ ಭಾರೀ ಮಳೆಗೆ ಮುಂಬೈ ಮುಳುಗಿ ಹೋಗಿತ್ತು. ಗುಡ್ಡ ಕುಸಿತದಿಂದಾಗಿ 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬರೀ ಮಳೆ ಮಾತ್ರವಲ್ಲ, ಹಿಮ ಕರಗಿ ಸಮುದ್ರ ಸೇರುತ್ತಿದೆ. ಇದರಿಂದಲೂ ಸಾಕಷ್ಟು ಅನಾಹುತಗಳಾಗುತ್ತಿದೆ. ಅಪಾಯದ ಕರೆಗಂಟೆ ಬಾರಿಸಿತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ