ವಾಹನ ಸವಾರರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ

ಶನಿವಾರ, 1 ಜುಲೈ 2023 (12:28 IST)
ಬೆಂಗಳೂರು : ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ ‘ನೈಸ್ ರಸ್ತೆ’ಯಲ್ಲಿ ಪ್ರಯಾಣಿಸುವುದು ಇನ್ನು ದುಬಾರಿಯಾಗಲಿದೆ. ನೈಸ್ ರಸ್ತೆಯ ಟೋಲ್ ದರ ಪರಿಷ್ಕರಿಸಲಾಗಿದ್ದು, ಜುಲೈ 1 ರಿಂದ (ಶನಿವಾರ) ಪರಿಷ್ಕೃತ ದರ ಜಾರಿಗೆ ಬರಲಿದೆ.
 
ಟೋಲ್ ದರಗಳನ್ನು ಶೇಕಡಾ 11 ರಷ್ಟು ಹೆಚ್ಚಿಸಲಾಗಿದೆ. ವೆಚ್ಚಗಳು ಹೆಚ್ಚಾಗಿರುವ ಕಾರಣ ಟೋಲ್ ದರ ಹೆಚ್ಚಿಸಲಾಗಿದೆ ಎಂದು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ ತಿಳಿಸಿದೆ. ಈ ಕುರಿತು ಸಂಸ್ಥೆಯು ಪ್ರಕಟಣೆ ಬಿಡುಗಡೆ ಮಾಡಿದ್ದು, ಪರಿಷ್ಕೃತ ದರ ಶನಿವಾರದಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.

ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಕ್ಲೋವರ್ ಲೀಫ್ ಜಂಕ್ಷನ್, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ ಮತ್ತು ಲಿಂಕ್ ರಸ್ತೆ ಮಾರ್ಗಗಳಲ್ಲಿ ನೈಸ್ ರಸ್ತೆಯನ್ನು ಆಗಾಗ್ಗೆ ಬಳಸುವ ಪ್ರಯಾಣಿಕರು ಶನಿವಾರದಿಂದ ಹೆಚ್ಚುವರಿ ದರ ತೆರಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ