ಆ್ಯಪ್ನಲ್ಲಿರುವ ಸಮಸ್ಯೆ ಕಂಡುಹಿಡಿದವರಿಗೆ ಸಿಗುತ್ತೆ 3 ಲಕ್ಷ ರೂ. ಬಹುಮಾನ!

ಶನಿವಾರ, 10 ಜುಲೈ 2021 (09:39 IST)
Zomato Bug Bounty: ಜೊಮ್ಯಾಟೊ ಆ್ಯಪ್ ಅಥವಾ ವೆಬ್ಸೈಟ್ನಲ್ಲಿ ಬಗ್ ಅಥವಾ ಸಮಸ್ಯೆ ಕಂಡು ಬಂದರೆ ಅದನ್ನು ತಿಳಿಸುವ ಮೂಲಕ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ಕಂಪನಿ ನೀಡಿದೆ. ಒಬ್ಬ ವ್ಯಕ್ತಿ ಸುಮಾರು 3 ಲಕ್ಷದವರೆಗೆ ಈ ಬಹುಮಾನವನ್ನು ಸ್ವೀಕರಿಸಬಹುದಾಗಿ ತಿಳಿಸಿದೆ.



ಆಹಾರ ವಿತರಿಸುವ ಜೊಮ್ಯಾಟೊ ತನ್ನ ಗ್ರಾಹಕರಿಗೆ ನಿರ್ದಿಷ್ಟ ಸಮಯದಲ್ಲಿ ಆಹಾರವನ್ನು ತಲುಪಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಬೆಂಗಳೂರಿನಂತಹ ದೊಡ್ಡ ನಗರ ಪ್ರದೇಶಗಳಲ್ಲಿ ವೇಗವಾಗಿ ಆಹಾರವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಜನಪ್ರಿಯತೆ ಗಳಿಸಿದೆ. ಇದೀಗ ಗ್ರಾಹಕರ ಸುರಕ್ಷತೆಯನ್ನು ಮನಗಂಡು ಜುಲೈ 8ರಂದು ಜೊಮ್ಯಾಟೊ ಬಗ್ ಬೌಂಟಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರ ಮೂಲಕ ಜೊಮ್ಯಾಟೊ ಆ್ಯಪ್ ಅಥವಾ ವೆಬ್ಸೈಟ್ನಲ್ಲಿ ದುರ್ಬಲತೆ ಕಂಡರೆ ಅದನ್ನು ತಿಳಿಸಬಹುದಾಗಿದೆ ಎಂದು ಹೇಳಿದೆ.
ಜೊಮ್ಯಾಟೊ ಆ್ಯಪ್ ಅಥವಾ ವೆಬ್ಸೈಟ್ನಲ್ಲಿ ಬಗ್ ಅಥವಾ ಸಮಸ್ಯೆ ಕಂಡು ಬಂದರೆ ಅದನ್ನು ತಿಳಿಸುವ ಮೂಲಕ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ಕಂಪನಿ ನೀಡಿದೆ. ಒಬ್ಬ ವ್ಯಕ್ತಿ ಸುಮಾರು 3 ಲಕ್ಷದವರೆಗೆ ಈ ಬಹುಮಾನವನ್ನು ಸ್ವೀಕರಿಸಬಹುದಾಗಿ ತಿಳಿಸಿದೆ.
ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಜೊಮ್ಯಾಟೊ ಬಗ್ ಬೌಂಟಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಮೂಲಕ ಮತ್ತಷ್ಟು ಅಭಿವೃದ್ಧಿ ಪಡಿಸಿ, ಹ್ಯಾಕರ್ಗಳ ತೊಂದರೆಯನ್ನು ತಪ್ಪಿಸುವ ಉದ್ದೇಶ ಹೊಂದಿದೆ. ಇದುವರೆಗೆ ನಮ್ಮ ಕಾರ್ಯಕ್ರಮಕ್ಕೆ ನೀವು ನೀಡಿದ ಕೊಡುಗೆಗೆ ಧನ್ಯವಾದಗಳು. ನಿಮ್ಮ ವರದಿಗಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ಜೊಮ್ಯಾಟೊ ತಿಳಿಸಿದೆ
ಜೊಮ್ಯಾಟೊ ಸೆಕ್ಯುರಿಟಿ ಇಂಜಿನಿಯರ್ ಯಶ್ ಸೋಧಾ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ