ಯೋಜನೆಗೆ ಶ್ರೀಗಳ ಹೆಸರಿಡಬೇಕು : ವಿಜಯೇಂದ್ರ

ಶುಕ್ರವಾರ, 1 ಏಪ್ರಿಲ್ 2022 (12:43 IST)
ತುಮಕೂರು : ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮೀಜಿಗಳ ಹೆಸರು ಇಡಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ  ಬಿ.ವೈ ವಿಜಯೇಂದ್ರ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

ಇಂದು ಸಿದ್ದಗಂಗಾ ಮಠದಲ್ಲಿ ಶ್ರೀಗಳ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಅವರು, ಇಂದು ಸಂಭ್ರಮ ಸಡಗರದ ದಿನ.

ವಿಶ್ವದಲ್ಲಿ ಪೂಜಿಸಿದ ಪುಣ್ಯಪುರುಷ, ಆಧುನಿಕ ಬಸವಣ್ಣ ಸಿದ್ದಗಂಗಾ ಶ್ರೀಗಳು. ತ್ರಿವಿಧ ದಾಸೋಹಿಗಳ ಜನ್ಮ ದಿನೋತ್ಸವ. ಸರ್ದಾರ್ ಪಟೇಲ್ ನಂತ್ರ ಧೀಮಂತ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಇಂದು ಗೃಹ ಸಚಿವರು ಮಾತ್ರ ಆಗಿರದೇ, ಮಠದ ಭಕ್ತರಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎಂದರು.

ಅನ್ನದಾಸೋಹ ದೇವರ ಕೆಲಸ ಅಂತ ಭಾವಿಸಿ ಶ್ರೀಗಳು ಕೆಲಸ ಮಾಡಿದರು. ಬಸವಣ್ಣರ ವಚನದಂತೆ ಈ ಶತಮಾನದಲ್ಲಿ ಬಡವರ ಪರ ಕೆಲಸ ಮಾಡಲು ಮಠ ಕಟ್ಟಿದರು. ಮಠಕ್ಕಾಗಿ ಭಿಕ್ಷೆ ಬೇಡಿ ಮಠ ಕಟ್ಟಿದವರು ಶ್ರೀಗಳು. ಶ್ರೀಗಳು ಕರ್ನಾಟಕದ ಆಧ್ಯಾತ್ಮಿಕ ಮೇರು ಪರ್ವತವಾಗಿ ಇದ್ದವರು.

ಯಡಿಯೂರಪ್ಪನವರು 4 ಬಾರಿ ಸಿಎಂ ಆಗೋಕೆ ಶ್ರೀಗಳ ಆಶೀರ್ವಾದ ಕಾರಣ. ಸಿಎಂ ಅವರು ದಾಸೋಹ ದಿನ ಅಂತ ಘೋಷಣೆ ಮಾಡಿದ್ರು. ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮಿಗಳ ಹೆಸರು ಇಡಬೇಕು ಅಂತ ಇದೇ ವೇಳೆ ಸಿಎಂಗೆ ವಿಜಯೇಂದ್ರ ಮನವಿ ಮಾಡಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ