ವಾಷಿಂಗ್ಟನ್ : ಅಮೆರಿಕದಲ್ಲಿ ಪತ್ತೆಯಾಗಿರುವ ಮಂಕಿ ಪಾಕ್ಸ್ ಸಾಂಕ್ರಾಮಿಕ ರೋಗವು ದೈಹಿಕ ಸಂಪರ್ಕದ ಮೂಲಕವೂ ಹರಡಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇದುವರೆಗೆ ಈ ವೈರಸ್ ಗಾಯ, ಮೂಗು, ಬಾಯಿ ಅಥವಾ ಕಣ್ಣುಗಳ ಮೂಲಕ ಆರೋಗ್ಯವಂತ ವ್ಯಕ್ತಿಯ ದೇಹವನ್ನು ಪ್ರವೇಶಿಸಬಹುದು ಎಂದು ತಜ್ಞರು ಭಾವಿಸಿದ್ದರು.
ಆದರೆ ಇದೀಗ ಇದು ಲೈಂಗಿಕ ಸಂಪರ್ಕದ ಮೂಲಕವೂ ಹರಡಬಹುದು ಎಂದು ವೈದ್ಯರು ಭಯಪಟ್ಟಿದ್ದಾರೆ. ಅಲ್ಲದೆ ಈ ಬಗ್ಗೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ನೀವು ಮಂಕಿ ಪಾಕ್ಸ್ ಹೊಂದಿರುವ ಯಾರೊಂದಿಗಾದರೂ ಸೆಕ್ಸ್ ಮಾಡಿದರೆ ಅವರ ಸಂಗಾತಿಗೂ ಮಂಕಿ ಪಾಕ್ಸ್ ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಈ ವೈರಸ್ ಸಿಡುಬು ರೋಗಕ್ಕೆ ಕಾರಣವಾದ ವೆರಿಯೊಲಾ ವೈರಸ್ ಹಾಗೂ ಸಿಡುಬು ರೋಗಕ್ಕೆ ಬಳಸಲಾದ ವ್ಯಾಕ್ಸಿನಿಯಾ ವೈರಸ್ನ ಆರ್ಥೋಪಾಕ್ಸ್ ವೈರಸ್ ಗೆ ಸೇರಿದ್ದಾಗಿದೆ.
ಲಕ್ಷಣಗಳೇನು..?
ಮೈಮೇಲೆ ಕೆಂಪು ದದ್ದುಗಳ ಜೊತೆಗೆ ಜ್ವರದ ರೋಗಲಕ್ಷಣಗಳು ಕಂಡುಬರುತ್ತದೆ. ಜ್ವರ, ನೆಗಡಿ, ತಲೆನೋವು, ಮೈಕೈ ನೋವು ಮುಂತಾ ಸಾಮಾನ್ಯ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತದೆ.