ಆರೋಗ್ಯದ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!

ಶುಕ್ರವಾರ, 13 ಜನವರಿ 2023 (15:22 IST)
ಬೆಂಗಳೂರು : `ಬೆಳಗ್ಗೆ ಎದ್ದರೆ ಸಾಕು ಹೊರಗೆ ಕಾಲಿಡೋಕೆ ಆಗಲ್ಲ, ಚಳಿಯಪ್ಪಾ ಚಳಿ’ ಇದು ಸದ್ಯ ಬೆಂಗಳೂರಿನ ಪರಸ್ಥಿತಿ. ಹಾಗಾಗಿ ಚಳಿ ಇನ್ನೂ ಎಷ್ಟು ದಿನ ಇರುತ್ತೆ? ಇದ್ರಿಂದ ಜನರ ಆರೋಗ್ಯದಲ್ಲಾದ ಏರುಪೇರುಗಳೇನು? ಅನ್ನೋ ಚಿಂತೆ ಜನರಲ್ಲಿ ಮನೆ ಮಾಡಿದ್ದು, ಹವಾಮಾನ ಇಲಾಖೆ ಆರೋಗ್ಯ ಸಲಹೆ ನೀಡಿದೆ.

ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಚಳಿಯಿದೆ. ಬೆಂಗಳೂರಿಗೂ ಸಹ ಕೊರವ ಚಳಿಯ ಎಫೆಕ್ಟ್ ತಟ್ಟಿದ್ದು, ಸಿಲಿಕಾನ್ ಸಿಟಿ ಜನ ಥಂಡಾ ಹೊಡೆದಿದ್ದಾರೆ. ಈ ಚಳಿ ಕಾಟ ಈ ತಿಂಗಳ ಕೊನೆಯವರೆಗೂ ಇರಲಿದೆ ಅಂತಾ ಹವಾಮಾನ ಇಲಾಖೆ ಹೇಳಿದೆ. ಆದ್ರೆ ಸಂಕ್ರಾಂತಿವರೆಗೆ ಹೆಚ್ಚು ಶೀತ, ಚಳಿಗಾಳಿ ಇರಲಿದೆ. ಮುಂದಿನ ವಾರದಲ್ಲಿ ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಹೇಳಿದ್ದಾರೆ. 

ಕಳೆದ ಕೆಲ ದಿನಗಳಿಂದ ಹೆಚ್ಚಾಗಿದ್ದು, ಬಹುತೇಕ ಕಡೆ ಕನಿಷ್ಠ ಉಷ್ಣಾಂಶ ಕೂಡ ಗಮನಾರ್ಹವಾಗಿ ಇಳಿಕೆ ಕಂಡಿದೆ. ನಿನ್ನೆ ಅತೀ ಕಡಿಮೆ ಕನಿಷ್ಠ ಉಷ್ಣಾಂಶ ಬಾಗಲಕೋಟೆಯಲ್ಲಿ 8.4 ದಾಖಲಾಗಿದೆ. ಇಂದು ಬೀದರ್, ವಿಜಯಪುರ, ಬಾಗಲಕೋಟೆ, ಬಳ್ಳಾರಿ ಹಾಗೂ ಮಂಡ್ಯ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ. 

ಆದ್ದರಿಂದ ತಲೆ, ಕೈ, ಕಾಲಿಗೆ ಸಾಕ್ಸ್ ಹಾಕಬೇಕು, ಕಿವಿಗೆ ಹತ್ತಿ ಇಟ್ಟುಕೊಳ್ಳಬೇಕು, ಸೂರ್ಯನ ಬೆಳಕಿಗೆ ಮೈ ಒಡ್ಡಿ ನಿಲ್ಲಬೇಕು ಎಂದು ಹವಾಮಾನ ತಜ್ಞ ಪ್ರಸಾದ್ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ