ಕಳೆದ 20 ವರ್ಷಗಳಲ್ಲೇ ಇದು 2ನೇ ದಾಖಲೆ

ಶನಿವಾರ, 1 ಜುಲೈ 2023 (08:46 IST)
ಶಿಮ್ಲಾ : ಈ ವರ್ಷ ಜೂನ್ ತಿಂಗಳಲ್ಲಿ ಹಿಮಾಚಲ ಪ್ರದೇಶದ ರಾಜಧಾನಿಯಲ್ಲಿ 324.9 ಮಿಮೀ ಮಳೆ ದಾಖಲಾಗಿದೆ. ಇದು ಕಳೆದ 20 ವರ್ಷಗಳಲ್ಲೇ ಜೂನ್ ತಿಂಗಳಲ್ಲಿ ಶಿಮ್ಲಾದಲ್ಲಿ ಸುರಿದ 2ನೇ ದಾಖಲೆಯ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
 
2008ರ ಜೂನ್ನಲ್ಲಿ ಶಿಮ್ಲಾದಲ್ಲಿ 570.2 ಮಿಮೀ ಮಳೆಯಾಗಿತ್ತು. ಮುಂದಿನ 2 ದಿನಗಳಲ್ಲಿ ರಾಜಸ್ಥಾನ, ಹರಿಯಾಣ ಹಾಗೂ ಪಂಜಾಬ್ನಂತಹ ಉಳಿದ ದೇಶದ ಭಾಗಗಳಲ್ಲಿ ನೈಋತ್ಯ ಮುಂಗಾರಿನ ಪ್ರಭಾವ ಇರಲಿದೆ. ವಾಯುವ್ಯ, ಮಧ್ಯ ಹಾಗೂ ಪಶ್ಚಿಮ ಭಾರತದಲ್ಲಿ ಮಾನ್ಸೂನ್ನ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ