ಬೆಂಗಳೂರು : ಕೆಎಸ್ಆರ್ಟಿಸಿ ಬಸ್ಗಳಲ್ಲಿ ಇನ್ಮುಂದೆ 30 ಕೆಜಿವರೆಗೆ ಉಚಿತ ಲಗೇಜ್ ಸಾಗಿಸಲು ಅವಕಾಶ ಕಲ್ಪಿಸಿದೆ.
ಆದ್ರೆ ನಾಯಿಗಳನ್ನು ಬಸ್ಗಳಲ್ಲಿ ಕೊಂಡೊಯ್ಯುವುದಾದ್ರೇ ಅದಕ್ಕೆ ಫುಲ್ ಟಿಕೆಟ್ ಪಡೆಯಬೇಕು ಎಂದು ಕೆಎಸ್ಆರ್ಟಿಸಿ ಸುತ್ತೋಲೆ ಹೊರಡಿಸಿದೆ. ನಾಯಿ ಮರಿಗೆ ಅರ್ಧ ಟಿಕೆಟ್ ಎಂದು ಉಲ್ಲೇಖಿಸಿದೆ.
ಒಂದು ವೇಳೆ 30 ಕೆ.ಜಿಗಿಂತ ಹೆಚ್ಚು ಲಗೇಜ್ ಇದ್ದರೆ 30 ಕೆ.ಜಿಯನ್ನು ಉಚಿತವಾಗಿ ಪರಿಗಣಿಸಿ ಉಳಿದ ಲಗೇಜ್ಗೆ ಚಾರ್ಜ್ ಮಾಡಲು ತಿಳಿಸಿದೆ.
30 ಕೆಜಿ ವರೆಗೂ ಉಚಿತ ಲಗೇಜ್ಗೆ ಅವಕಾಶ ಕೊಟ್ಟು ನಾಯಿ ಕೊಂಡೊಯ್ಯುವುದಾದರೆ ಫುಲ್ ಟಿಕೆಟ್ ವಿಧಿಸಿದೆ. ನಾಯಿ ಮರಿ ಕೊಂಡೊಯ್ದರೆ ಅರ್ಧ ಟಿಕೆಟ್ ವಿಧಿಸಿದೆ.