ತಿರುವನಂತಪುರಂ : ರಾಷ್ಟ್ರೀಯ ತನಿಖಾ ದಳ ದಾಳಿ ವಿರೋಧಿಸಿ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಇದರಿಂದ ಭಾರೀ ನಷ್ಟವಾಗಿದ್ದು ಕೇರಳ ಸಾರಿಗೆ ಸಂಸ್ಥೆಯು ಪಿಎಫ್ಐನಿಂದ 5.06 ಕೋಟಿ ಪರಿಹಾರ ಕೇಳಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಕಳೆದ ಸೆಪ್ಟೆಂಬರ್ 23ರಂದು ಎನ್ಐಎ 15 ರಾಜ್ಯಗಳಲ್ಲಿ 93 ಕಡೆ ನಡೆಸಿದ ದಾಳಿಯಲ್ಲಿ ನೂರಾರು ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು, ಹಲವರನ್ನು ಬಂಧಿಸುವ ಕೆಲಸ ಮಾಡಿತ್ತು.
ಇದನ್ನು ಖಂಡಿಸಿದ ಪಿಎಫ್ಐ ಕಾರ್ಯಕರ್ತರು ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಗಿ ತಿರುವನಂತಪುರಂ, ಕೊಲ್ಲಂ, ಕೋಝಿಕ್ಕೋಡ್, ವಯನಾಡ್ ಮತ್ತು ಅಲಪ್ಪುಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿ ಸಾಕಷ್ಟು ಬಸ್ಗಳನ್ನ ಜಖಂಗೊಳಿಸಿದ್ದರು.