ನಾಳೆಯೂ ಶಾಲಾ, ಕಾಲೇಜುಗಳಿಗೆ ರಜೆ

ಬುಧವಾರ, 6 ಜುಲೈ 2022 (15:58 IST)
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮಳೆಯ ಆಬ್ಬರ ಮುಂದುವರಿದಿದ್ದು ಜಿಲ್ಲೆಯ ಹಲವೆಡೆ ಗುಡ್ಡ ಕುಸಿದು ಅವಾಂತರ ಸೃಷ್ಟಿಯಾಗಿದೆ.
 
ಇಂದು ಮುಂಜಾನೆ ಮದೆನಾಡು ಸಮೀಪದ ಕರ್ತೋಜಿ ಬಳಿ ಗುಡ್ಡಕುಸಿತಾಗಿದ್ದು ಕೆಲ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಇಂದು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಕೆಳಭಾದ ರಿಟೈನಿಂಗ್ ವಾಲ್ ಮಳೆಯ ಹೊಡೆತಕ್ಕೆ ಸ್ವಲ್ಪ ಪ್ರಮಾಣದಲ್ಲಿ ಉಬ್ಬಿದ ರಿಟೈನ್ ವಾಲ್, ಮದೆನಾಡು ಸಮೀಪದ ಕರ್ತೋಜಿ ಬಳಿಯ ಉಬ್ಬಿದ ರಸ್ತೆ ಹಾಗೂ ಗುಡ್ಡ ಕುಸಿದ ಪ್ರದೇಶಗಳಿಗೆ ಹಾಗೂ ಚಾಮುಂಡೇಶ್ವರಿ ನಗರದ ಅಪಾಯಕಾರಿ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಮುಂಡೇಶ್ವರಿ ನಗರಕ್ಕೆ ಭೇಟಿ ನೀಡಿದ ಶಾಸಕರು ಅಪಾಕಾರಿ ಮನೆಗಳನ್ನ ಸ್ಥಾಳಂತರಿಸುವಂತೆ ಹಾಗೂ ಯಾವುದೇ ಹೊಸ ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಅಪಾಯಾಕಾರಿ ಮನೆಗಳಲ್ಲಿ ವಾಸವಿರುವ ಮನೆ ಮಂದಿ ಎಲ್ಲ ಬೇರೆಗೆ ಸ್ಥಳಾಂತರಿಸುವಂತೆ ಶಾಸಕರು ಸೂಚನೆ ನೀಡಿದ್ದಾರೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ