ಲೌಡ್ ಸ್ಪೀಕರ್ ಬಳಸುವವರ ವಿರುದ್ಧ ಕಠಿಣ ಕ್ರಮ : ಕಮಲ್ ಪಂತ್

ಸೋಮವಾರ, 21 ಫೆಬ್ರವರಿ 2022 (07:27 IST)
ಬೆಂಗಳೂರು : ಲೌಡ್ ಸ್ಪೀಕರ್ ಬಳಸುವ ಎಲ್ಲ ಮಂದಿರ, ಮಸೀದಿಗಳಿಗೂ ಜನರಿಗೆ ಕಿರಿಕಿರಿ ಆಗದಂತೆ ಕಾರ್ಯಾಚರಿಸಲು ಸೂಚಿಸಲಾಗಿದೆ.

ಅನುಮತಿ ನೀಡಿರುವ ಡೆಸಿಬಲ್ನ ಮಿತಿಯನ್ನು ಮೀರಿ ಶಬ್ದ ಮಾಡಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಎಚ್ಚರಿಕೆ ನೀಡಿದರು.

ಸಾರ್ವಜನಿಕರ ಸಮಸ್ಯೆ ಆಲಿಸುವ ಸಲುವಾಗಿ ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಶನಿವಾರ ನಡೆಸಿದ ‘ಟ್ವಿಟರ್ ಲೈವ್ ಸೆಶನ್’ನಲ್ಲಿ ಸಾರ್ವಜನಿಕರೊಬ್ಬರ ದೂರಿಗೆ ಪ್ರತಿಕ್ರಿಯಿಸಿ ಈ ರೀತಿ ಭರವಸೆ ನೀಡಿದರು.

 ‘ಮಸೀದಿಗಳಲ್ಲಿ ಅಜಾನ್ ಕೂಗುವ ಶಬ್ದದ ಪ್ರಮಾಣ ಕಡಿಮೆ ಮಾಡಿಸುವಂತೆ ಪ್ರತಿ ಮೂರು ದಿನಗಳಿಗೊಮ್ಮೆ ಮಲ್ಲೇಶ್ವರ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಲಾಗುತ್ತಿದೆ. ದೂರು ನೀಡಿದ ಎರಡು ದಿನಗಳು ಅಜಾನ್ ಶಬ್ದ ಕಡಿಮೆ ಇರುತ್ತದೆ. ಬಳಿಕ ಶಬ್ದ ಜಾಸ್ತಿ ಮಾಡಿ ತೊಂದರೆ ನೀಡುತ್ತಿದ್ದಾರೆ. ಇದಕ್ಕೆ ಪೂರ್ಣ ಪರಿಹಾರ ನೀಡಿ’ ಎಂದು ಶ್ರೀರಾಮ್ ಎಂಬುವರು ಮನವಿ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ