ಪ್ರಯಾಣಿಕ ರೈಲು ಸಂಚಾರ ರದ್ದು!

ಶುಕ್ರವಾರ, 29 ಏಪ್ರಿಲ್ 2022 (13:29 IST)
ನವದೆಹಲಿ : ವಿದ್ಯುತ್ ಬಿಕ್ಕಟ್ಟನ್ನು ಪರಿಹರಿಸಲು ಭಾರತೀಯ ರೈಲ್ವೇ ದೇಶಾದ್ಯಂತ 650 ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.

ವಿದ್ಯುತ್ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಲ್ಲಿದ್ದಲು ಹೊತ್ತ ರೈಲುಗಳ ಸಾಗಾಟ ಸುಗಮವಾಗಲು ತಾತ್ಕಾಲಿಕವಾಗಿ ಕೆಲ ಪ್ರಯಾಣಿಕರ ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೇ ರದ್ದುಗೊಳಿಸಿದೆ. ರದ್ದುಗೊಳಿಸದೇ ಇರುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ದೇಶಾದ್ಯಂತ ವಿದ್ಯುತ್ ಬೇಡಿಕೆ ತೀವ್ರಗೊಂಡಿದ್ದು ಕಲ್ಲಿದ್ದಲು ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರೈಲ್ವೇಯು ಕಲ್ಲಿದ್ದಲು ಸಾಗಿಸುವ ರೇಕ್ಗಳು ವಿದ್ಯುತ್ ಸ್ಥಾವರಗಳನ್ನು ವೇಗವಾಗಿ ತಲುಪಲು ಕಳೆದ ಎರಡು ವಾರಗಳಲ್ಲಿ ಪ್ರತಿದಿನ ಸುಮಾರು 16 ಮೇಲ್/ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ರದ್ದು ಮಾಡಿದೆ. 

ರೈಲ್ವೇ ಸಚಿವಾಲಯವು ಮೇ 24 ರವರೆಗೆ ಸುಮಾರು 657 ಟ್ರಿಪ್ಗಳ ಮೇಲ್ ಮತ್ತು ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸುವಂತೆ ಸೂಚಿಸಿದೆ. ಪ್ರತಿದಿನ ಕಲ್ಲಿದ್ದಲು ರೇಕ್ಗಳ ಸರಾಸರಿ ಲೋಡಿಂಗ್ 400ಗಿಂತಲೂ ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲೇ ಅತ್ಯಧಿಕ ಎಂದು ವರದಿಯಾಗಿದೆ.

ರೈಲ್ವೆ ಸಚಿವಾಲಯ ಮತ್ತು ವಿದ್ಯುತ್ ಸಚಿವಾಲಯದ ಜಂಟಿ ಸಭೆಯಲ್ಲಿ, ಕಲ್ಲಿದ್ದಲು ಸಚಿವಾಲಯವು ಪ್ರಸ್ತುತ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಪ್ರತಿದಿನ 422 ಕಲ್ಲಿದ್ದಲು ರೇಕ್ಗಳನ್ನು ಓಡಿಸುವಂತೆ ರೈಲ್ವೆಗೆ ಮನವಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ