ವಿದ್ಯುತ್ ಸಮಸ್ಯೆ ಬಗ್ಗೆ ಸಾಕ್ಷಿ ಧೋನಿ ಟ್ವೀಟ್ ವೈರಲ್
ಜಾರ್ಖಂಡ್ ನಲ್ಲಿ ವಿದ್ಯುತ್ ಸಮಸ್ಯೆ ಬಹಳ ವರ್ಷಗಳಿಂದ ಇದೆ. ಒಬ್ಬ ತೆರಿಗೆದಾರಳಾಗಿ ಈ ಸಮಸ್ಯೆ ಯಾಕೆ ಪರಿಹಾರವಾಗುತ್ತಿಲ್ಲ ಎಂದು ತಿಳಿಯಲು ಬಯಸುತ್ತೇನೆ. ವಿದ್ಯುತ್ ಉಳಿಸಲು ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಾಕ್ಷಿ ಧೋನಿ ಮಾಡಿರುವ ಟ್ವೀಟ್ ವೈರಲ್ ಆಗಿದೆ.
ಈ ಟ್ವೀಟ್ ನೋಡಿ ಹಲವರು ಸಾಕ್ಷಿ ಧೋನಿಯನ್ನು ಬೆಂಬಲಿಸಿದ್ದರೆ ಮತ್ತೆ ಕೆಲವರು ಇಷ್ಟು ವರ್ಷವಾದ ಮೇಲೆ ಈಗ ನಿಮಗೆ ವಿದ್ಯುತ್ ಸಮಸ್ಯೆಯ ಗಂಭೀರತೆ ಅರಿವಾಯಿತೇ ಎಂದು ಟಾಂಗ್ ಕೊಟ್ಟಿದ್ದಾರೆ.