ಪ್ರಯಾಣಿಕರೇ ಗಮನಿಸಿ : ಇಂದು ಮೆಟ್ರೋ ಸಂಚಾರ ವ್ಯತ್ಯಯ

ಶನಿವಾರ, 28 ಮೇ 2022 (08:16 IST)
ಬೆಂಗಳೂರು : ಮೆಟ್ರೋ ನಿಲ್ದಾಣಗಳ ಕಾಮಗಾರಿ ಹಿನ್ನೆಲೆಯಲ್ಲಿ ಇಂದು ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
 
ಇಂದು ರಾತ್ರಿ ಬೈಯಪ್ಪನಹಳ್ಳಿ ಟು ಎಂಜಿ ರಸ್ತೆವರೆಗಿನ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಕೆಂಗೇರಿ ಟು ಬೈಯಪ್ಪನಹಳ್ಳಿ ಮೆಟ್ರೋ ಸೇವೆ ರಾತ್ರಿ 8.40ಕ್ಕೆ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಕಡೆಗೆ ರಾತ್ರಿ 9.10ಕ್ಕೆ ಕೊನೆಗೊಳ್ಳಲಿದೆ. 

ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಎಂ.ಜಿ.ರಸ್ತೆಗೆ ಎಂದಿನಂತೆ ಸೇವೆ ಇರಲಿದೆ. ಹಸಿರು ಬಣ್ಣದ ಮಾರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ