ಹೇಗೆ ನಡೆಯಲಿದೆ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ?

ಶನಿವಾರ, 19 ಮೇ 2018 (12:07 IST)
ಬೆಂಗಳೂರು: ಮೂರು ದಿನಗಳ ಸಿಎಂ ಯಡಿಯೂರಪ್ಪ ಸರ್ಕಾರ ಮುಂದುವರಿಯುತ್ತಾ ಎಂದು ಇಂದು ವಿಶ್ವಾಸ ಮತದ ಮೂಲಕ ನಿರ್ಣಯವಾಗಲಿದೆ. ಅಷ್ಟಕ್ಕೂ ವಿಶ್ವಾಸ ಮತ ನಡೆಯುವ ಪ್ರಕ್ರಿಯೆ ಹೇಗಿರುತ್ತದೆ ಗೊತ್ತಾ?

ಮೊದಲಿಗೆ ಸಿಎಂ ಯಡಿಯೂರಪ್ಪ ವಿಶ್ವಾಸ ಮತ ಪ್ರಸ್ತಾವನೆ ಸಲ್ಲಿಸುತ್ತಾರೆ. ‘ಬಿಎಸ್ ಯಡಿಯೂರಪ್ಪ ಎಂಬ ಹೆಸರಿನವಾದ ನನ್ನ ನೇತೃತ್ವದ ಸಚಿವ ಸಂಪುಟದ ಮೇಲೆ ವಿಶ್ವಾಸವಿಡುವಂತೆ ಕೋರುತ್ತೇನೆ’ ಎಂದು ಯಡಿಯೂರಪ್ಪ ಪ್ರಸ್ತಾವನೆ ಸಲ್ಲಿಸುತ್ತಾರೆ.

ಬಳಿಕ ಇದರ ಮೇಲೆ ಚರ್ಚೆ ನಡೆಸುವುದಾದರೆ ಅದಕ್ಕೆ ಅವಕಾಶವಿದೆ. ಅದಾದ ಬಳಿಕ ಪ್ರಸ್ತಾವನೆಯನ್ನು ಮತಕ್ಕೆ ಹಾಕಲಾಗುತ್ತದೆ. ಮೊದಲು ಪರ ಇರುವವರ ಲೆಕ್ಕ ಹಾಕಲಾಗುತ್ತದೆ.

ಇಲ್ಲಿ ಸೀಕ್ರೆಟ್ ವೋಟಿಂಗ್ ಇಲ್ಲ. ಹಾಗಾಗಿ ಪರ ಅಥವಾ ವಿರೋಧ ಇರುವ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಬಹುದು. ಪ್ರಸ್ತಾವದ ಪರ ಹೆಚ್ಚು ಮತ ಬಂದರೆ ಯಡಿಯೂರಪ್ಪನವರು ವಿಶ್ವಾಸ ಮತ ಗೆದ್ದಂತೆ. ವಿರೋಧಕ್ಕೆ ಹೆಚ್ಚು ಮತ ಬಂದರೆ ಅಲ್ಲಿಗೆ ಸರ್ಕಾರ ವಿಶ್ವಾಸ ಮತ ಕಳೆದುಕೊಂಡಿದೆ ಎಂದರ್ಥ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ