ವರುಣಾ ಕ್ಷೇತ್ರದ ಉಸ್ತುವಾರಿ ವಿಜಯೇಂದ್ರಗೆ

ಮಂಗಳವಾರ, 24 ಏಪ್ರಿಲ್ 2018 (12:54 IST)
ನಿನ್ನೆಯಿಂದ ಹೈಕಮಾಂಡ್ ಸ್ಥಳೀಯ ನಾಯಕರ ಜೊತೆ ಸಾಕಷ್ಟು ಚರ್ಚೆ ಮಾಡಿದ್ದಾರೆ. ವಿಜಯೇಂದ್ರ ಇಪ್ಪತ್ತು ದಿನ ಇಲ್ಲಿಯೇ ಇದ್ದು ಕೆಲಸ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 
ಹೈಕಮಾಂಡ್ ತೀರ್ಮಾನದಂತೆ ನನ್ನ‌ ಮಗ ಸ್ಪರ್ಧೆ ಮಾಡುತ್ತಿಲ್ಲ. ಆದರೆ, ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ. ವಿಜಯೇಂದ್ರಗೆ ಪಕ್ಷ ದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.
 
ವರುಣಾ ಚುನಾವಣಾ ಉಸ್ತುವಾರಿಯನ್ನ ವಿಜಯೇಂದ್ರ ವಹಿಸಲಿದ್ದಾರೆ. ರಾಜ್ಯದ ಜನ ಶಾಂತಿಯಿಂದ ಸಹಕರಿಸುವಂತೆ ಯಡಿಯೂರಪ್ಪ ಮನವಿ ಮಾಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ