ರಷ್ಯಾ ಮಾತುಕತೆಯಲ್ಲಿ ಉಕ್ರೇನ್ ಷರತ್ತುಗಳೇನು?

ಸೋಮವಾರ, 28 ಫೆಬ್ರವರಿ 2022 (19:33 IST)
ರಷ್ಯಾದೊಂದಿಗೆ ಸಂಧಾನ ಮಾತುಕತೆಗೆ ಒಪ್ಪಿರುವ ಉಕ್ರೇನ್ ಮೊಟ್ಟ ಮೊದಲಾಗಿ ತಕ್ಷಣ ರಷ್ಯಾ ಸೇನಾಪಡೆ ಕದನ ವಿರಾಮ ಘೋಷಿಸಿ ಉಕ್ರೇನ್ನಿಂದ ಹೊರನಡೆಯಬೇಕೆಂದು ಪಟ್ಟು ಹಿಡಿದಿದೆ.
 
ಅಲ್ಲದೆ ಈಗಾಗಲೇ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದು, ಇನ್ನಾದರೂ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲು ಸಹಕರಿಸಿ ಎಂದು ಮನವಿ ಮಾಡಿಕೊಂಡಿದೆ. 

 
ದೇಶದಲ್ಲಿರುವ ಪ್ರತಿಯೊಬ್ಬರು ಕೂಡ ಈ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿದ್ದೀರಿ. ನಮ್ಮ ಸುಂದರ ಉಕ್ರೇನ್ನಲ್ಲಿ ಇದೀಗ ಅಶಾಂತಿ ಕಾಡುತ್ತಿದೆ. ಶಾಂತಿಗಾಗಿ ಎಲ್ಲಾ ಪ್ರಜೆಗಳು ಕೂಡ ಇದೀಗ ಯೋಧರಾಗಿ ಎಂದು ಕರೆ ನೀಡಿದ್ದಾರೆ.

ಉಕ್ರೇನ್, ರಷ್ಯಾ ಯುದ್ಧದ ಬಗ್ಗೆ ಮಾತನಾಡಿದ ಭಾರತದ ಉಕ್ರೇನ್ ರಾಯಭಾರಿ, ಈಗಾಗಲೇ ಉಕ್ರೇನ್ನಲ್ಲಿ ಸಾಕಷ್ಟು ಸಾವುನೋವುಗಳು ಸಂಭವಿಸಿದೆ. 16 ಪುಟ್ಟ ಮಕ್ಕಳು ರಷ್ಯಾದ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.

ಬಾಂಬ್ ಮತ್ತು ಕ್ಷಿಪಣಿಗಳ ಮೂಲಕ ರಷ್ಯಾ ಸೈನಿಕರು ಉಕ್ರೇನ್ನಲ್ಲಿ ರಕ್ತಪಾತ ನಡೆಸಿದ್ದಾರೆ. ಇದೀಗ ಸಂಧಾನಕ್ಕೆ ಮುಂದಾಗಿದ್ದು, ರಷ್ಯಾ ಕೂಡಲೇ ಉಕ್ರೇನ್ನಿಂದ ಹಿಂದೆ ಸರಿಯಲಿ ಎಂದು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ