ಮುಂಜಾನೆಯಿಂದ ಬಾಂಬ್ ಹಾಗೂ ಗುಂಡಿನ ದಾಳಿ ಹೆಚ್ಚಾಗಿದೆ. ಬಂಕರ್ಗಳಿಂದ ಹೊರಬರಲು ಜನ ಭಯಪಡುತ್ತಿದ್ದಾರೆ. ಉಕ್ರೇನ್ನ ಖಾರ್ಕೀವ್ ಪ್ರದೇಶದಲ್ಲಿ ಜನರು ಪರದಾಡುತ್ತಿದ್ದಾರೆ. ಖಾರ್ಕೀವ್ನ ಮೆಟ್ರೋ ಅಂಡರ್ ಪಾಸ್ ಹಾಗೂ ಬಂಕರ್ಗಳಲ್ಲಿ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಬಿಸ್ಕೇಟ್ ಹಾಗೂ ಬ್ರೆಡ್ ತಿಂದು ಜೀವನ ಸಾಗಿಸುವ ಸ್ಥಿತಿ ಎದುರಾಗಿದೆ. ಕೊಡಗಿನ ಮತ್ತೋರ್ವ ವಿದ್ಯಾರ್ಥಿ ಉಕ್ರೇನ್ನಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕುಶಾಲನಗರ ತಾಲ್ಲೂಕಿನ ಕೂಡ್ಲೂರು ನಿವಾಸಿ ಚಂದನ್ ಅಪಾಯದಲ್ಲಿದ್ದು, ಕಳೆದ ಒಂದು ವಾರದಿಂದ ಕಾರ್ಕಿವ್ ಪ್ರಾಂತ್ಯದ ಕತ್ತಲ ಬಂಕರ್ನಲ್ಲಿರುವ ಕರ್ನಾಟಕದ ಒಂಭತ್ತು ಮಂದಿಯಿದ್ದಾರೆ. ಅಸಹ್ಯ ವಾತಾವರಣದಲ್ಲಿ ಒಂಭತ್ತು ವಿದ್ಯಾರ್ಥಿಗಳಿದ್ದು, ದಿನಕ್ಕೆರಡು ಬಿಸ್ಕೆಟ್ ಮಾತ್ರ ತಿಂದು ಬದುಕುತ್ತಿದ್ದಾರೆ. ತಮ್ಮ ದಯನೀಯ ಪರಿಸ್ಥಿತಿ ಬಗ್ಗೆ ವಿಡಿಯೋ ಮಾಡಿದ್ದಾರೆ. ನಾವು ಜೀವಂತವಾಗಿ ಬರುತ್ತೀವೋ ಇಲ್ವೋ ಆನ್ನೋ ಆತಂಕವಿದ್ದು, ನಮ್ಮ ಜೀವ ಉಳಿಸಿ ಅಂತ ಕನ್ನಡಿಗ ವಿದ್ಯಾರ್ಥಿಗಳು ಮೊರೆ ಇಡುತ್ತಿದ್ದಾರೆ.
ಸದ್ಯ 5ನೇ ಬ್ಯಾಚ್ನಲ್ಲಿ ಉಕ್ರೇನ್ನಿಂದ ವಿದ್ಯಾರ್ಥಿಗಳು ವಾಪಸಾಗಿದ್ದಾರೆ. ಏರ್ ಏಷ್ಯಾ ವಿಮಾನದ ಮೂಲಕ ಸಂಜೆ 6.45ಕ್ಕೆ 5 ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ. ಶ್ರವಣ ಸಂಗಣ್ಣ ಬಿರಾದಾರ್, ಶಕ್ತಿ ಶ್ರೀ ಶೇಖರ್, ಮೈನಾ ನೈಲ್ ನಾಯ್ಕ್, ನಿಹಾರಿಕಾ ಮತ್ತು ಆಶಾ ವೆಂಕಟೇಶ್ ರೆಡ್ಡಿ