ರೂಪಾಂತರಿ ತಡೆಗೆ ತಜ್ಞರ ಸಲಹೆ ಏನು?

ಗುರುವಾರ, 2 ಡಿಸೆಂಬರ್ 2021 (08:43 IST)
ಹೊಸ ತಳಿಗೆ ಬ್ರೇಕ್ ಕೊಡ್ಬೇಕು ಅಂದ್ರೆ ಮೊದಲು ವಿದೇಶದಿಂದ ಬರುವ ಪ್ರಯಾಣಿಕರಿಗೆ ಕೊವಿಡ್ ಟೆಸ್ಟ್ ಮಾಡ್ಬೇಕು.
ಬಳಿಕ ಪಾಸಿಟಿವ್ ಬಂದ್ರೆ ಕ್ವಾರಂಟೈನ್ ಮಾಡಿ, ಸ್ವಾಂಪಲ್ಸ್ನ್ನು ಜಿನೋಮ್ ಸೀಕ್ವೆನ್ಸಿಂಗ್ಗೆ ಕಳಿಸಬೇಕು. ಇದ್ರ ಜೊತೆಗೆ ನಗರದ ಕಂಟೇನ್ಮೆಂಟ್ ಜೋನ್ಗಳ ಮೇಲೆ ನಿಗಾವಹಿಸಬೇಕು.. ಅಲ್ದೆ, ಸಭೆ-ಸಮಾರಂಭ, ಪಾರ್ಟಿ, ಕಾರ್ಯಕ್ರಮಕ್ಕೆ ರೂಲ್ಸ್ ಮಾಡ್ಬೇಕು.
ಇಷ್ಟೇ ಅಲ್ಲ, ಅಗತ್ಯವಾದ್ರೆ ಕೊವಿಡ್ ಟೆಸ್ಟಿಂಗ್ ಪ್ರಮಾಣವನ್ನ ಹೆಚ್ಚಿಸ್ಬೇಕು.. ಇನ್ನು, ಪಾರ್ಕ್, ಚಿತ್ರಮಂದಿರ, ಮಾಲ್ ಪ್ರವೇಶಕ್ಕೆ ಲಸಿಕೆ ಕಡ್ಡಾಯಗೊಳಿಸ್ಬೇಕು. ಅದು ಕೂಡ ಎರಡೂ ಡೋಸ್ ಲಸಿಕೆ ಪಡೆದವರಿಗಷ್ಟೇ ಪ್ರವೇಶ ಮಾಲ್ ಪ್ರವೇಶಕ್ಕೆ ಅವಕಾಶ ಕೊಡ್ಬೇಕು. ಮುಖ್ಯವಾಗಿ ಶಾಲೆಗಳಲ್ಲಿ ತಿಂಗಳಿಗೊಮ್ಮೆ ಶೇ.10ರಷ್ಟು ಮಕ್ಕಳಿಗೆ ಪರೀಕ್ಷೆ ಮಾಡ್ಬೇಕು ಅಂತಾ ತಜ್ಞರು ಸಲಹೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ