ತಿರುವನಂತಪುರಂ : ವಿವಾಹಿತ ಮಹಿಳೆ ಗರ್ಭಪಾತ ಮಾಡಿಸಲು ಪತಿಯ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಸೋಮವಾರ ತಿಳಿಸಿದೆ.
ಕೇರಳ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ವಿಜಿ ಅರುಣ್ ಅವರಿದ್ದ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿತು. 21 ವರ್ಷ ವಯಸ್ಸಿನ ಗರ್ಭಿಣಿಯೊಬ್ಬರು 21 ವಾರಗಳ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಅನುಮತಿ ಕೋರಿ ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಾಲಯವು ಈ ಆದೇಶವನ್ನು ನೀಡಿದೆ.
ಈ ವೇಳೆ ಗರ್ಭಿಣಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿರುವುದಿಲ್ಲ ಅಥವಾ ವಿಧವೆಯಾಗಿರುವುದಿಲ್ಲ. ಗರ್ಭಾವಸ್ಥೆಯ ಮತ್ತು ಹೆರಿಗೆಯ ಸಮಯದಲ್ಲಿ ಒತ್ತಡ ಮತ್ತು ನೋವು ಅನುಭವಿಸುವುದು ಮಹಿಳೆಯರು ಎಂಬ ಕಾರಣವನ್ನು ಉಲ್ಲೇಖಿಸಿ,
ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಮಹಿಳೆ ತನ್ನ ಪತಿಯ ಅನುಮತಿಯನ್ನು ಪಡೆಯುವ ಯಾವುದೇ ಅಗತ್ಯವಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.