ಮಹಿಳಾ ದಿನಾಚರಣೆ : ಸಿಲಿಕಾನ್ ಸಿಟಿ ಮಹಿಳೆಯರಿಗೆ ಗುಡ್ ನ್ಯೂಸ್

ಬುಧವಾರ, 8 ಮಾರ್ಚ್ 2023 (09:28 IST)
ಬೆಂಗಳೂರು : ಮಹಿಳಾ ದಿನಾಚರಣೆ ಹಿನ್ನೆಲೆ ಬಿಎಂಟಿಸಿ ಸಿಲಿಕಾನ್ ಸಿಟಿ ಮಹಿಳೆಯರಿಗೆ ಗುಡ್ ನ್ಯೂಸ್ ಒಂದನ್ನ ನೀಡಿದ್ದು, ಇಂದು ದಿನ ಪೂರ್ತಿ ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರು ಎಲ್ಲಿಂದ ಎಲ್ಲಿಗೆ ಬೇಕಾದ್ರು ಸಂಚರಿಸುವ ಅವಕಾಶ ಮಾಡಿ ಕೊಡುವುದರೊಂದಿಗೆ, ಅರ್ಥಪೂರ್ಣವಾಗಿ ಮಹಿಳಾದಿನಾಚರಣೆಗೆ ಮುಂದಾಗಿದೆ.
 
ಕರ್ನಾಟಕದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ನೀಡುವ ಮೂಲಕ ಈ ವರ್ಷದ ಮಹಿಳೆ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ.

ಇಂದು ಮಹಿಳೆಯರ ದಿನವಾಗಿದ್ದರಿಂದ ಬಿಎಂಟಿಸಿ ಬಸ್ಗಳಲ್ಲಿ ದಿನಪೂರ್ತಿ ಮಹಿಳೆಯರು ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು. ಬಿಎಂಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಯಾವುದೇ ದಾಖಲಾತಿ, ಗುರುತಿನ ಚೀಟಿಯ ಅವಶ್ಯಕತೆ ಇಲ್ಲ. 

ಹೆಣ್ಣು ಅಬಲೆ ಅಥವಾ ಸಬಲೆ ಆಗುವುದು ಯಾವಾಗ? ಅದರಲ್ಲೂ ಅವಳು ದುರ್ಬಲಳಾಗುವುದು ಯಾವಾಗ? ತನ್ನ ಕುಟುಂಬ, ತವರು, ಮಕ್ಕಳು ಅವಳಿಗೆ ಜೀವ. ವೃತ್ತಿಯಲ್ಲಿ ಎಷ್ಟೇ ಮೇಲೆ ಏರಿದರೂ ಅವಳಿಗೆ ತನ್ನ ಸಂಸಾರದ ಚಿಂತೆ ಇದ್ದೇ ಇರುತ್ತದೆ.

ತಾನು ಒಳ್ಳೆಯ ಮಗಳು, ಸೊಸೆ, ಹೆಂಡತಿ ಆಗದಿದ್ದರೂ ಪರವಾಗಿಲ್ಲ, ಒಳ್ಳೆಯ ತಾಯಿ ಆಗಬೇಕು ಎಂದು ಎಲ್ಲಾ ಹೆಣ್ಣುಗಳಿಗೆ ಆಸೆ. ಈ ನಿಟ್ಟಿನಲ್ಲಿ ಬಹಳ ಹೆಂಗಸರು ತಮ್ಮ ವೃತ್ತಿಯನ್ನು ತ್ಯಾಗ ಮಾಡಿದ್ದೂ ಇದೆ. ಅಥವಾ ಸಂಸಾರಕ್ಕಾಗಿ ಬರುವ ಭಡ್ತಿಗಳನ್ನು ನಿರಾಕರಿಸಿ, ಕಡಿಮೆ ದರ್ಜೆಯಲ್ಲಿ ಇರುವ ಉದಾಹರಣೆಗಳೂ ಇವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ