ನವದೆಹಲಿ: ದೇಶದ 72 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಧಾನಿ ಮೋದಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಭಾಷಣ ಮಾಡಿದರು.
ತಮ್ಮ ಭಾಷಣದ ಆರಂಭದಲ್ಲಿಯೇ ಪ್ರಧಾನಿ ಮೋದಿ ಅತ್ಯಾಚಾರ ಪ್ರಕರಣದಲ್ಲಿ ಸಂಕಷ್ಟಕ್ಕೀಡಾದ ಮಹಿಳೆಯರು, ಮಳೆಯಿಂದ ದುರ್ಘಟನೆಗೆ ಒಳಗಾದವರಿಗೆ ತಮ್ಮ ಸಂತಾಪ ವ್ಯಕ್ತಪಡಿಸಿದರು.
ನಂತರ ದೇಶದ ವೀರ ಯೋಧರನ್ನು ಸ್ಮರಿಸಿಕೊಂಡ ಪ್ರಧಾನಿ ಮೋದಿ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಗಮನಾರ್ಹ ಬದಲಾವಣೆ ತಂದಿದ್ದೇವೆ. ಇದೇ ವೇಗದಲ್ಲಿ ಹೋದರೆ ನಮ್ಮ ದೇಶ ಇನ್ನಷ್ಟು ಅಭಿವೃದ್ಧಿಯ ಗುರಿಗೆ ಹತ್ತಿರವಾಗಲಿದೆ ಎಂದರು.
ದೇಶದಲ್ಲಿ ಮೊಬೈಲ್ ತಯಾರಿಕಾ ಸಂಸ್ಥೆಗಳು ಹೆಚ್ಚಾಗಿವೆ. ಹಾಗೆಯೇ ಯುದ್ಧ ವಿಮಾನ ಖರೀದಿಯಲ್ಲಿ ನಾವು ಮುಂದಿದ್ದೇವೆ. ಶೌಚಾಲಯ ನಿರ್ಮಾಣ ಕಾರ್ಯದಲ್ಲಿ 100 ಶೇಕಡಾ ಯಶಸ್ಸು ಸಾಧಿಸಿದ್ದೇವೆ. ಗ್ರಾಮಗಳು ಆಪ್ಟಿಕಲ್ ಫೈಬರ್ ನೆಟ್ ವರ್ಕ್ ಕೇಂದ್ರಗಳಾಗಿವೆ ಎಂದಿದ್ದಾರೆ.
ಇನ್ನು ಜಿಎಸ್ ಟಿ ತೆರಿಗೆ ಜಾರಿಗೆ ತಂದಿದ್ದೇವೆ. ಇದಕ್ಕೆ ಸಹಕರಿಸಿದ ಸಣ್ಣ ವ್ಯಾಪಾರಿಗಳಿಗೆ ಧನ್ಯವಾದಗಳು. ಅಕ್ರಮ ಹಣ ಬಯಲಿಗೆ ಎಳೆದಿದ್ದೇವೆ. ಜನರ ಹಿತಕ್ಕಾಗಿ ಸಂಕಲ್ಪದೊಂದಿಗೆ ನಾವು ಹೊರಟಿದ್ದೇವೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.