ಬಜೆಟ್ 2021 ಮಂಡಿಸಲಿರುವ ಸರ್ಕಾರಕ್ಕೆ ರಾಹುಲ್ ಗಾಂಧಿಯ ಮೂರು ಸಲಹೆಗಳು
ಸೋಮವಾರ, 1 ಫೆಬ್ರವರಿ 2021 (10:44 IST)
ನವದೆಹಲಿ: 2021 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿರುವ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂರು ಸಲಹೆ ನೀಡಿದ್ದಾರೆ.
ರಾಹುಲ್ ಗಾಂಧಿ ನೀಡಿರುವ ಆ ಮೂರು ಸಲಹೆಗಳಲ್ಲಿ ಮೊದಲನೆಯದಾಗಿ, ಸಣ್ಣ ಕೈಗಾರಿಕೆಗಳು, ರೈತರು ಮತ್ತು ನೌಕರರಿಗೆ ಉತ್ತೆಜನ ನೀಡುವ ಪ್ಯಾಕೇಜ್ ಘೋಷಿಸಿ ಉದ್ಯೋಗ ಸೃಷ್ಟಿ ಮಾಡಿ. ಎರಡನೆಯದಾಗಿ ಆರೋಗ್ಯ ವಲಯಕ್ಕೆ ಹೆಚ್ಚಿನ ಕೊಡುಗೆ ನೀಡಿ ಜನರ ಜೀವ ಉಳಿಸಲು ಸಹಾಯ ಮಾಡಿ. ಮೂರನೆಯದಾಗಿ ಗಡಿ ರಕ್ಷಣೆಗೆ ಹೆಚ್ಚಿನ ಮೊತ್ತ ಮೀಸಲಿರಿಸಿ ದೇಶ ಕಾಯುವ ಸೈನಿಕರ ಹಿತ ಕಾಯಿರಿ. ಹೀಗೆ ಮೂರು ಸಲಹೆಗಳನ್ನು ನೀಡಿದ್ದಾರೆ.