ನವದೆಹಲಿ: 2021 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾಗ-1 ರಲ್ಲಿ ಕೃಷಿ, ಕೈಗಾರಿಕೆ, ಆರೋಗ್ಯ ವಲಯಕ್ಕೆ ವಿವಿಧ ಕೊಡುಗೆಗಳನ್ನು ನೀಡಿದ್ದಾರೆ. ಅವರು ಬಜೆಟ್ ನಲ್ಲಿ ಪ್ರಸ್ತಾಪಿಸಿದ ಪ್ರಮುಖ ಅಂಶಗಳು ಇಲ್ಲಿದೆ.
ಭತ್ತ ಖರೀದಿಗೆ 1 ಲಕ್ಷ 72 ಸಾವಿರ ಕೋಟಿ ಅನುದಾನ
ಗೋಧಿ ಬೆಳೆಗಾರರಿಗೆ 62 ಸಾವಿರ ಕೋಟಿ ಅನುದಾನ
ಆರೋಗ್ಯ ಕ್ಷೇತ್ರಕ್ಕೆ 2.73 ಲಕ್ಷ ಕೋಟಿ ರೂ. ಮೀಸಲು
ಸ್ವಚ್ಛ ಭಾರತ ಯೋಜನೆಗೆ 1,41,000 ಕೋಟಿ ರೂ.
ಪಶು ಸಂಗೋಪನೆ, ಡೈರಿ, ಮೀನುಗಾರಿಗೆ 40 ಸಾವಿರ ಕೋಟಿ ಅನುದಾನ
ಎಲ್ಲಾ ರಾಜ್ಯಗಳಿಗೂ ಸ್ವಾಮಿತ್ವ ಯೋಜನೆ
8,500 ಕೋಟಿ ಕಿ.ಮೀ. ಹೆದ್ದಾರಿ ನಿರ್ಮಾಣ
ಧಾನ್ಯಗಳ ಖರೀದಿಗೆ 10,500 ಕೋಟಿ
ಕೃಷಿಕರಿಗೆ ಸಾಲ ನೀಡಲು 16.5 ಲಕ್ಷ ಕೋಟಿ ನಿಗದಿ
ವಿದ್ಯುತ್ ವಲಯ ಸುಧಾರಣೆಗೆ 3 ಲಕ್ಷಕ್ಕೂ ಅಧಿಕ ಕೋಟಿ ಮೀಸಲು
ಯಾರಿಂದ ಬೇಕಾದರೂ ವಿದ್ಯುತ್ ಖರೀದಿಸಲು ಅವಕಾಶ
ಜಮ್ಮು ಕಾಶ್ಮೀರದಲ್ಲೂ ಗ್ಯಾಸ್ ಪೈಪ್ ಲೈನ್ ಅಳವಡಿಕೆ
ಎಪಿಎಂಸಿಗಳಿಗೆ ಕೃಷಿ ಮೂಲ ಸೌಕರ್ಯ ಫಂಡ್ ನೀಡಿಕೆ
ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ 15,700 ಕೋಟಿ ರೂ.
ಬೆಂಗಳೂರು ಮೆಟ್ರೋಗೆ 14 ಸಾವಿರ ಕೋಟಿ
ಎನ್ ಜಿಒ ಸಹಭಾಗಿತ್ವದಲ್ಲಿ 100 ಸೈನಿಕ್ ಶಾಲೆಗಳ ಸ್ಥಾಪನೆ
ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರ ನೆರವಿಗೆ ಪೋರ್ಟಲ್ ಸ್ಥಾಪನೆ
ಎಸ್ ಸಿ, ಎಸ್ ಟಿಯ 10 ನೇ ತರಗತಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಗೆ 35 ಸಾವಿರ ಕೋಟಿ.