ಉಷ್ಟ್ರಾಸನ

ಸಂಸ್ಕೃತದಲ್ಲಿ ಉಷ್ಟ್ರ ಅಂದರೆ 'ಒಂಟೆ' ಎಂಬರ್ಥ. ಹಾಗಾಗಿ ಈ ಆಸನದ ಭಂಗಿಯನ್ನು ಒಂಟೆ ಭಂಗಿ ಎಂದೂ ಹೇಳಲಾಗುತ್ತದೆ. ಇದು ಭಾಗಿದ(ಧನುರಾಸನ) ಮತ್ತು ಮೇಲ್ಮುಖ ಭಾಗಿರುವ (ಊರ್ಧ್ವ ಧನುರಾಸನ) ನಡುವಿನ ಸ್ಥಿತ್ಯಂತರ ಭಂಗಿ.

ಉಷ್ಟ್ರಾಸನ ಹಾಕುವ ವಿಧಾನ
*ಮೊಣಕಾಲುಗಳನ್ನು ಹಿಂದಕ್ಕೆ ಬಗ್ಗಿಸಿ ಆರುಇಂಚುಗಳ ಅಂತರ ಇರುವಂತೆ ಇರಿಸಿ. ಪಾದಗಳನ್ನು ನಿತಂಬದಡಿಯಲ್ಲಿರಿ. ಕಾಲ್ಬೆರಳುಗಳು ಮತ್ತು ಅಂಗಾಲಿನ ತಿರುವಿನಲ್ಲಿ ಕುಳಿತುಕೊಳ್ಳಿ. ಪಾದಗಳನ್ನು ಸಾಧ್ಯವಾದಷ್ಟೂ ನಿತಂಬದ ಕೆಳಗಿರಿಸಿ. ದೇಹ, ಬೆನ್ನು ಮತ್ತು ಕತ್ತನ್ನು ನೇರವಾಗಿಸಿ ಮತ್ತು ಅಂಗೈಗಳನ್ನು ಆಯಾ ಮೊಣಕಾಲುಗಳ ಮೇಲಿರಿಸಿ.
WD


*ಮೊಣಕಾಲಿನ ಮೇಲೆ ಭಾಗುತ್ತಾ, ಹಿಂದಕ್ಕೆ ಚಾಚಿ ಮತ್ತು ಬಲ ಹಿಮ್ಮಡಿಯ ಗಂಟನ್ನು ಬಲಕೈಯಲ್ಲೂ, ಎಡಹಿಮ್ಮಡಿಯ ಗಂಟನ್ನು ಎಡಗೈಯಲ್ಲೂ ಹಿಡಿಯಿರಿ.

*ಉಸಿರನ್ನು ಒಳಗೆಳೆದುಕೊಳ್ಳಿ ಮತ್ತು ಸೊಂಟ ಮತ್ತು ತೊಡೆಗಳನ್ನು ನೇರವಾಗಿಸುತ್ತಾ ಹಿಮ್ಮಡಿ ಗಂಟುಗಳ ಭದ್ರ ಹಿಡಿತವನ್ನು ಮುಂದುವರಿಸಿ. ನಿತಂಬ ಹಾಗೂ ಸೊಂಟವನ್ನು ಕೊಂಚ ಮುಂಚಾಚುತ್ತಾ ಕತ್ತು ಮತ್ತು ತಲೆಯನ್ನು ಎಷ್ಟು ಸಾಧ್ಯವೋ ಅಷ್ಟು ಬಗ್ಗಿಸಿ. ಸಹಜ ಉಸಿರಾಟವನ್ನು ಮುಂದುವರಿಸಿ ಮತ್ತು ಇದೇ ಭಂಗಿಯಲ್ಲಿ 6-8 ಸೆಕುಂಡುಗಳ ಕಾಲ ಇರಿ.

*ಉಸಿರು ಬಿಡಿ ಮತ್ತು ಮಾಮೂಲಿ ಮಂಡಿಯೂರಿದ ಸ್ಥಿತಿಗೆ ಮರಳಿ ಬನ್ನಿ.

ಅನುಕೂಲಗಳು
ಹಿಮ್ಮಡಿಗಂಟು, ತೊಡೆ, ದೇಹ, ಎದೆ, ಗಂಟಲು, ನಿತಂಬ ಹಾಗೂ ಮಾಂಸಖಂಡಗಳನ್ನು ಬಿಗಿಗೊಳಿಸುತ್ತದೆ. ಕತ್ತು ಮತ್ತು ಕಿಬ್ಬೊಟ್ಟೆಯ ಅಂಗಾಶಗಳಿಗೆ ಉತ್ತೇಜನ ನೀಡುತ್ತದೆ.

ಈ ಆಸನ ಅಸ್ತಮಾ ನಿಗ್ರಹಿಸಬಲ್ಲದು ಮತ್ತು ತಡೆಯಬಹುದು. ಉಸಿರಾಟದ ಕಾರ್ಯಾಚರಣೆಯನ್ನು ಉತ್ತಮಗೊಳಿಸುತ್ತದೆ. ಶ್ವಾಸಕೋಶ, ನಾಸಿಕದ ಅಂಗಾಂಗಗಳು ಹಾಗೂ ನರಗಳ ಕಾರ್ಯಾಚರಣೆಯನ್ನೂ ಉತ್ತಮ ಗೊಳಿಸುತ್ತದೆ. ಇದು ತಲೆಶೂಲೆ, ಟಾನ್ಸಿಲ್ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ತಡೆಗಟ್ಟುತ್ತದೆ. ಈ ಆಸನದ ನಿಯತ ಅಭ್ಯಾಸವು ಸ್ತ್ರೀಯತ ಋತು ಸಮಸ್ಯೆಗಳು, ಉದ್ವೇಗವನ್ನೂ ಕಡಿಮೆಗೊಳಿಸುತ್ತದೆ.

ವೆಬ್ದುನಿಯಾವನ್ನು ಓದಿ