ಈ ಆಸನದಲ್ಲಿ ಕಾಲಬೆರಳು ಮತ್ತು ಕಾಲುಗಂಟುಗಳನ್ನು ಸ್ಪರ್ಷಿಸಲಾಗುತ್ತದೆ. ಈ ಆಸನದಲ್ಲಿ ಕೈಯನ್ನು ಕಾಲುಗಳ ಸಮೀಪಕ್ಕೆ ತರುವುದರಿಂದ ಇದಕ್ಕೆ ಪಾದಹಸ್ತಾಸನ ಎಂದು ಕರೆಯಲಾಗುತ್ತದೆ.
ವಿಧಾನ:
ಪ್ರಾರಂಭದಲ್ಲಿ, ಕಾಲನ್ನು ಹತ್ತಿರವಾಗಿಸಿ ನೇರವಾಗಿ ನಿಂತುಕೊಳ್ಳಿ. ಉಸಿರನ್ನು ಒಳತೆಗೆದುಕೊಂಡು, ಎರಡೂ ಕೈಗಳನ್ನು ಮೇಲಕ್ಕೆತ್ತಿ, ಕೈಗಳು ನೇರವಾಗಿದ್ದು, ಕಿವಿಗೆ ತಾಗುವಂತಿರಲಿ.
ಉಸಿರನ್ನು ಹೊರತೆಗೆದು, ಸೊಂಟದಿಂದ ಕೆಳಗೆ ಬಾಗಿ, ನಿಮ್ಮ ಕೈಗಳಿಂದ ಕಾಲನ್ನು ಮುಟ್ಟಿರಿ. ಈ ಭಂಗಿಯಲ್ಲಿ ಕಾಲನ್ನು ನೇರವಾಗಿರಿಸಿ. ತಲೆಯನ್ನು ಮೊಣಗಂಟಿಗೆ ಸಮೀಪದವರೆಗೆ ಬಾಗಿಸಿ.
ಇದೇ ಭಂಗಿಯಲ್ಲಿ ಸುಮಾರು 30-40 ಸೆಕೆಂಡುಗಳ ಕಾಲ ನಿಲ್ಲಿ. ಈ ಭಂಗಿ ಸೂರ್ಯ ನಮಸ್ಕಾರದ ಮೂರನೇ ಹಂತವೂ ಆಗಿದೆ.
ಈ ಭಂಗಿಯಿಂದ ಮರಳಲು, ಉಸಿರನ್ನು ಒಳತೆಗೆದುಕೊಂಡು ಕೈಗಳನ್ನು ಸಡಿಲಗೊಳಿಸಿ, ದೇಹವನ್ನು ಮೇಲಕ್ಕೆತ್ತಿ.
ಸೂಚನೆ:
ಬೆನ್ನುಹುರಿ ಸಮಸ್ಯೆ ಮತ್ತು ಉದರ ಸಂಬಂಧಿ ತೊಂದರೆಗಳನ್ನು ಹೊಂದಿದವರು ಈ ಆಸನವನ್ನು ಮಾಡುವುದು ಸೂಕ್ತವಲ್ಲ.
ಪ್ರಯೋಜನಗಳು: ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ.ನರವ್ಯೂಹವನ್ನು ಬಲಗೊಳಿಸುತ್ತದೆ.ಉದರದ ಸ್ನಾಯುಗಳು ಮತ್ತು ತೊಡೆಯ ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ.ಒಳಾಂಗಗಳನ್ನು ವಿಶೇಷವಾಗಿ ಜೀರ್ಣಕ್ರಿಯೆ ಸಂಬಂಧಿ ಅಂಗಗಳನ್ನು ಬಲಪಡಿಸುತ್ತದೆ.ಸಯಾಟಿಕಾದಂತಹ ಸಮಸ್ಯೆಗಳ ನಿವಾರಣೆಗೆ ಇದು ಪ್ರಯೋಜನಕಾರಿ