ತಲೆನೋವು ಪರಿಹಾರಕ್ಕೆ ಈ ಯೋಗ ಸೂಕ್ತ

Krishnaveni K

ಸೋಮವಾರ, 9 ಸೆಪ್ಟಂಬರ್ 2024 (12:06 IST)
ಬೆಂಗಳೂರು: ಇತ್ತೀಚೆಗೆ ಜೀವನ ಶೈಲಿಯಿಂದಾಗಿ ಬಹಳಷ್ಟು ಜನರಲ್ಲಿ ತಲೆನೋವಿನ ಸಮಸ್ಯೆ ಬಹುತೇಕರನ್ನು ಕಾಡುತ್ತಿದೆ. ಇದಕ್ಕೆ ಯೋಗದಲ್ಲಿ ಪರಿಹಾರ ಕಂಡುಕೊಳ್ಳಬಹುದು. ಅದಕ್ಕೆ ಯಾವ ಯೋಗ ಸೂಕ್ತ ಎಂಬ ವಿವರ ಇಲ್ಲಿದೆ ನೋಡಿ.

ಯೋಗದಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಹೆಚ್ಚಾಗಿ ಇಂದಿನ ದಿನಗಳಿಂದ ಒತ್ತಡದ ಜೀವನದಿಂದಾಗಿ ತಲೆ ನೋವು, ಅಥವಾ ಮೈಗ್ರೇನ್ ನಂತಹ ಸಮಸ್ಯೆಯಿಂದ ಅನೇಕರು ಬಳಲುತ್ತಾರೆ. ಇದಕ್ಕೆ ನೋವು ನಿವಾರಕಗಳನ್ನು ನುಂಗಿದರೆ ತಾತ್ಕಾಲಿಕ ಪರಿಹಾರ ಸಿಗಬಹುದಷ್ಟೇ.

ಆದರೆ ತಲೆನೋವಿನಂತಹ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಬೇಕಾದರೆ ಶಾಂತ ಮನಸ್ಥಿತಿಯಲ್ಲಿ ಕುಳಿತು ಯೋಗ, ಧ್ಯಾನ ಮಾಡುವುದು ಮತ್ತು ಸೂಕ್ತ ವಿಶ್ರಾಂತಿ ಪಡೆಯುವುದು ಅಗತ್ಯವಾಗಿದೆ. ತಲೆನೋವು ನಿವಾರಣೆಗೆ ಪದೋತ್ತನಾಸನ ಮಾಡುವುದು ಸೂಕ್ತ. ಇದನ್ನು ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ ನೋಡಿ.

ಇದನ್ನು ಗೋಡೆಯ ಬಳಿ ಮಾಡಬೇಕಾಗುತ್ತದೆ. ಮೊದಲು ಬೆನ್ನು ಮಾತ್ರ ನೆಲಕ್ಕೆ ತಾಗುವಂತೆ ಮಲಗಿ, ಕಾಲುಗಳನ್ನು ಮೇಲೆತ್ತಿ ಗೋಡೆಗೆ ನೇರವಾಗಿ ಲಂಬಾಸನದಲ್ಲಿರಿಸಿ. ಸೊಂಟ ಕೂಡಾ ನೆಲಕ್ಕೆ ಸಮವಾಗಿರುವಂತೆ ನೋಡಿಕೊಳ್ಳಿ. ಈಗ ಕಣ್ಣುಗಳನ್ನು ಮುಚ್ಚಿ ಕೈಗಳನ್ನು ಎರಡೂ ಬದಿಗೆ ಅಗಲವಾಗಿ ತೆರೆದುಕೊಂಡು ಉಸಿರನ್ನು ನಿಧಾನವಾಗಿ ಎಳೆದುಕೊಂಡು ಬಿಡಿ. ಈ ಭಂಗಿಯಲ್ಲಿ ಸುಮಾರು 30 ಸೆಕೆಂಡು ಇದ್ದರೆ ಸಾಕು. ಇದೇ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ತಲೆನೋವಿನ ಸಮಸ್ಯೆ ಕ್ರಮೇಣ ನಿವಾರಣೆಯಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ