ಜಾತಕ


ಮೇಷ
ಹಗ್ಗವೂ ಹಾವಾಗುವ ಪರಿಸ್ಥಿತಿ ಇಂದು ನಿಮ್ಮದು. ಉದ್ಯೋಗ ಕ್ಷೇತ್ರದಲ್ಲಿ ಸಂಕಷ್ಟಗಳು ಮುಂದುವರಿಯಲಿದೆ. ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಮಕ್ಕಳಿಂದ ಸಹಕಾರ ಸಿಗುವುದು. ದೇವತಾ ಪ್ರಾರ್ಥನೆ ಮಾಡಿ.
ರಾಶಿ ಗುಣಗಳು

ವೃಷಭ
ಸಂಗಾತಿಯ ಪರಿಸ್ಥಿತಿ ಅರಿತುಕೊಂಡು ಮಾತುಗಳನ್ನು ಆಡಬೇಕಾಗುತ್ತದೆ. ಮಾತಿನ ಮೇಲೆ ನಿಗಾ ಇರಲಿ. ಹೊಸ ಸ್ನೇಹಿತರನ್ನು ಸಂಪಾದಿಸಲಿದ್ದೀರಿ. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ.
ರಾಶಿ ಗುಣಗಳು

ಮಿಥುನ
ಉದ್ಯೋಗ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡಲಿದ್ದೀರಿ. ಹಣ ಸಂಪಾದನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ಯಂತ್ರೋಪಕರಣಗಳೊಂದಿಗೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ.
ರಾಶಿ ಗುಣಗಳು

ಕರ್ಕಾಟಕ
ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಿ. ಮಹಿಳೆಯರಿಗೆ ಬಂಧುಮಿತ್ರರನ್ನು ಬರಮಾಡಿಕೊಳ್ಳಲು ಸಿದ್ಧತೆ ಮಾಡಬೇಕಾಗುತ್ತದೆ. ಮಕ್ಕಳಿಗೆ ಕಿರು ಪ್ರವಾಸದ ಖುಷಿ ಸಿಗುವುದು.
ರಾಶಿ ಗುಣಗಳು

ಸಿಂಹ
ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಂಡು ಮನಸ್ಸಿನ ನೆಮ್ಮದಿ ಹಾಳುಮಾಡಿಕೊಳ್ಳಬೇಡಿ. ನಿಮ್ಮ ಒಳ್ಳೆತನವನ್ನು ದುರುಪಯೋಗಪಡಿಸಿಕೊಳ್ಳುವವರು ಇರುತ್ತಾರೆ. ಎಚ್ಚರಿಕೆಯಿಂದಿರಿ. ಮಾತಿನ ಮೇಲೆ ನಿಗಾ ಇರಲಿ.
ರಾಶಿ ಗುಣಗಳು

ಕನ್ಯಾ
ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ ನಿಮ್ಮದಾಗುವುದು. ಹಿಂದೆ ಮಾಡಿದ ಒಳ್ಳೆಯ ಕೆಲಸಕ್ಕೆ ಇಂದು ತಕ್ಕ ಪ್ರತಿಫಲ ಸಿಗಲಿದೆ. ಹೂಡಿಕೆ ವ್ಯವಹಾರಗಳಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ.
ರಾಶಿ ಗುಣಗಳು

ತುಲಾ
ಮನಸ್ಸಿನಲ್ಲಿರುವ ಮಾತುಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬದ ಪರಿಸ್ಥಿತಿ ನಿಮ್ಮದಾಗಲಿದೆ. ಶುಭ ಮಂಗಲ ಕೆಲಸಗಳಿಗೆ ದಿನ ನಿಗದಿ ಮಾಡಲಿದ್ದೀರಿ. ತಾಳ್ಮೆಯಿರಲಿ.
ರಾಶಿ ಗುಣಗಳು

ವೃಶ್ಚಿಕ
ವ್ಯವಹಾರ ನಿಮಿತ್ತ ಮಾಡುವ ಪ್ರಯಾಣಗಳು ಯಶಸ್ವಿಯಾಗಲಿದೆ. ಆಪ್ತರಿಂದ ಸೂಕ್ತ ಸಮಯದಲ್ಲಿ ಸಹಾಯವೊದಗಿಬರಲಿದೆ. ಸಾಮಾಜಿಕ ಕೆಲಸಗಳಿಂದ ತೃಪ್ತಿ ಸಿಗುವುದು. ಹಿರಿಯರ ಸಲಹೆ ಪಾಲಿಸಿ.
ರಾಶಿ ಗುಣಗಳು

ಧನು
ವೈವಾಹಿಕ ಸಂಬಂಧಗಳಲ್ಲಿ ತೊಡಕುಗಳು ಕಂಡುಬರಲಿದೆ. ಮಾತಿನ ಮೇಲೆ ನಿಗಾ ಇರಲಿ. ಯಾವುದೇ ಕೆಲಸಕ್ಕೆ ಮುನ್ನ ಹಿರಿಯರೊಂದಿಗೆ ಪರಾಮರ್ಶೆ ನಡೆಸುವುದು ಉತ್ತಮ. ಹಣಕಾಸಿನ ಖರ್ಚು ವೆಚ್ಚಗಳ ಬಗ್ಗೆ ಎಚ್ಚರಿಕೆಯಿರಲಿ.
ರಾಶಿ ಗುಣಗಳು

ಮಕರ
ಇಷ್ಟ ಮಿತ್ರರಿಂದ ನಿಮ್ಮ ಸಂತೋಷ ವೃದ್ಧಿಯಾಗಲಿದೆ. ಕೆಲಸ ಕಾರ್ಯಗಳಲ್ಲಿ ಉದಾಸೀನ ಪ್ರವೃತ್ತಿ ಕಂಡುಬಂದೀತು. ಮಹಿಳೆಯರಿಗೆ ಮಂಗಳ ವಸ್ತ್ರ ಖರೀದಿ ಯೋಗ. ಆರೋಗ್ಯದಲ್ಲಿ ಇದ್ದ ಸಮಸ್ಯೆಗಳು ಪರಿಹಾರವಾಗಲಿದೆ.
ರಾಶಿ ಗುಣಗಳು

ಕುಂಭ
ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಕೊಂಚ ಕಡಿಮೆಯಾಗಲಿದೆ. ಸರ್ಕಾರೀ ಅಧಿಕಾರಿಗಳಿಗೆ ಉನ್ನತಿಯ ಯೋಗ. ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ.
ರಾಶಿ ಗುಣಗಳು

ಮೀನ
ಆಸ್ತಿ ವಿಚಾರಗಳಲ್ಲಿ ಯಾರನ್ನೂ ನಂಬಲಾಗದ ಸ್ಥಿತಿಯಿರಲಿದೆ. ಸಂಗಾತಿಯ ಮಾತುಗಳನ್ನು ಅಲಕ್ಷಿಸಬೇಡಿ. ದೇಹಾರೋಗ್ಯ ಸುಧಾರಿಸುವುದು. ವಿದ್ಯಾರ್ಥಿಗಳಿಗೆ ಉನ್ನತಿಯ ಯೋಗ.
ರಾಶಿ ಗುಣಗಳು