ಜಾತಕ

ಮೀನ
ಈ ತಿಂಗಳು ವಿವಾಹದ ಪ್ರಯತ್ನಗಳಿಗೆ ಮುನ್ನಡೆ. ಸಂಗಾತಿಯೊಂದಿಗೆ ಸುಮಧುರ ಸಂದರ್ಭಗಳನ್ನು ಕಳೆಯಲಿದ್ದೀರಿ. ವಿದ್ಯಾರ್ಥಿಗಳು ಸಮಯದ ಸದುಪಯೋಗಪಡಿಸಿಕೊಳ್ಳಬೇಕಾಗುತ್ತದೆ. ಮಹಿಳೆಯರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡುಬಂದೀತು. ಈ ತಿಂಗಳು ಉದ್ಯೋಗದಲ್ಲಿರುವವರು ತಮ್ಮ ಖರ್ಚುಗಳನ್ನು ನಿಯಂತ್ರಿಸುವುದು ಅಗತ್ಯವಾಗಿರುತ್ತದೆ, ಇಲ್ಲದಿದ್ದರೆ ಅವರು ಆರ್ಥಿಕ ಕೊರತೆಯನ್ನು ಎದುರಿಸಬೇಕಾಗಬಹುದು.