
ಮಿಥುನ
ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಮತೋಲನ ಅಗತ್ಯವಿದೆ. ಮಿಥುನ ರಾಶಿಗೆ 2018ರ ರಾಶಿ ಭವಿಷ್ಯದ ಪ್ರಕಾರ ಮಕ್ಕಳು ತುಂಟರಾಗಿರುತ್ತಾರೆ. ಆದರೆ ಅವರು ಹೊಸ ಸಂಗತಿಗಳನ್ನು ತಿಳಿಯಲು ಆಸಕ್ತರಾಗಿರುತ್ತಾರೆ ಮತ್ತು ಅವರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಅವಿವಾಹಿತರಾಗಿದ್ದರೆ ಡಿಸೆಂಬರ್ ಮಧ್ಯದವರೆಗೆ ನಿಮ್ಮ ಇಷ್ಟದ ಸಂಗಾತಿಯೊಂದಿಗೆ ವಿವಾಹವಾಗುತ್ತೀರಿ. ವರ್ಷದ ಕೊನೆಯ ತ್ರೈಮಾಸಿಕದ ಅವಧಿಯಲ್ಲಿ ವೆಚ್ಚ ಹೆಚ್ಚಾಗಬಹುದು. ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು ಮತ್ತು ಗಾಳಿ ಸಂಬಂಧಿ ರೋಗಗಳು, ಗಂಟು ನೋವು ಇತ್ಯಾದಿ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸಬಹುದು. ಅತಿಯಾದ ನಾರಿನಂಶವಿರುವ ಆಹಾರ ಸೇವಿಸಬೇಡಿ. ಈ ವರ್ಷದಲ್ಲಿ ವ್ಯಾಪಾರ ಹೆಚ್ಚು ಲಾಭ ತಂದುಕೊಡುತ್ತದೆ.