
ಧನು
ನೀವು ಉತ್ತಮ ದಿಕ್ಕಿನಲ್ಲಿ ಸಾಗುತ್ತೀರಿ. ಹೀಗಾಗಿ, ಹಣಕಾಸು ನಿಮ್ಮ ಚಿಂತೆಗೆ ಕಾರಣವಾಗುವುದಿಲ್ಲ. ನಿಮ್ಮ ಗಳಿಕೆಯ ದಾರಿಗಳನ್ನು ಹೆಚ್ಚಿಸುವುದರತ್ತ ಗಮನ ಹರಿಸಬೇಕು ಮತ್ತು ಒಂದಕ್ಕಿಂತ ಹೆಚ್ಚು ಮೂಲದಿಂದ ನೀವು ಗಳಿಸಬಹುದಾಗಿದೆ. ಶನಿಯು ಕಠಿಣ ಪರಿಶ್ರಮಕ್ಕೆ ನಿಮ್ಮನ್ನು ತಯಾರು ಮಾಡುತ್ತಾನೆ. ಆದರೆ, ಅತಿಯಾಗಿ ಕೆಲಸ ಮಾಡಬೇಡಿ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಾರ್ಚ್‌ನಿಂದ ಮೇವರೆಗೆ ಸ್ವಲ್ಪ ಮಂಕಾದಂತೆ ಇರುತ್ತದೆ ಮತ್ತು ಅಕ್ಟೋಬರ್ ನಂತರ ಕೆಲವು ಆರೋಗ್ಯ ಸಮಸ್ಯೆ ಕಂಡುಬರಬಹುದು. ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಮಕ್ಕಳು ಶ್ರಮಜೀವಿಗಳಾಗಿರುತ್ತಾರೆ ಮತ್ತು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ.