ಹಲವಾರು ದಾಖಲೆ ಬರೆದ ಕಿಶನ್ ಅಭಿನಯದ ಟೀನೇಜ್

ಬುಧವಾರ, 24 ಜುಲೈ 2013 (15:12 IST)
PTI
ಹದಿಹರೆಯದ ವಯಸ್ಸಿನ ತುಮುಲ, ತೊಳಲಾಟಗಳು ಟೀನೇಜ್ ಚಿತ್ರದ ಕಥಾವಸ್ತು. ರಾಕ್ಸ್ಟಾರ್ ಕಿಶನ್ ಅಭಿನಯದ ಟೀನೇಜ್ ಚಿತ್ರ ಇದೇ 26ರಂದು ತೆರೆಗೆ ಅಪ್ಪಳಿಸಲಿದೆ.

ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ಇತ್ತ ಬಾಲ್ಯವೂ ಅಲ್ಲದ, ಅತ್ತ ಯೌವನವೂ ಅಲ್ಲದ ವಯಸ್ಸಿನಲ್ಲಿ ಗೊಂದಲ ಮನಸ್ಸಿನಲ್ಲಿ ಮಕ್ಕಳು ತೊಳಲಾಡುವುದನ್ನು ನಿರ್ದೇಶಕ ಎಚ್.ಆರ್. ಶ್ರೀಕಾಂತ್ ಚಿತ್ರದಲ್ಲಿ ತೋರಿಸಿದ್ದಾರೆ.

ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಚಿತ್ರಮಂದಿರಗಳ ಜೊತೆ ಅಂತರ್ಜಾಲದಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಜು.26ರಂದೇ ಅಂತರ್ಜಾಲದಲ್ಲೂ ಟೀನೇಜ್ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಶ್ರೀಕಾಂತ್ ತಿಳಿಸಿದ್ದಾರೆ. ಚಿತ್ರದ ಹಾಡೊಂದನ್ನು ಆಳ ನೀರಿನಲ್ಲಿ ಚಿತ್ರೀಕರಿಸಿರುವುದು, ಒಂದೇ ಹಾಡಿಗೆ 15,122 ಮಕ್ಕಳು ಹೆಜ್ಜೆ ಹಾಕಿರುವುದು ಚಿತ್ರದ ವಿಶೇಷ. ಹೀಗೆ ಹಲವಾರು ಕಾರಣಗಳಿಗೆ ಚಿತ್ರ ವಿಶ್ವದಾಖಲೆ ನಿರ್ಮಿಸಿದೆ. ಚಿತ್ರದ ಗಿನ್ನಿಸ್ ದಾಖಲೆಗೂ ಸೇರ್ಪಡೆಯಾಗಿದೆ.

ಚಿತ್ರಕ್ಕೆ ಮೂವರು ನಾಯಕಿಯರು. ತನ್ವಿ, ಪ್ರಿಯಾ ಭರತ್ ಹಾಗೂ ಅಪೂರ್ವ ಅರೋರ ಚಿತ್ರದಲ್ಲಿ ನಟಿಸಿದ್ದಾರೆ. ಜಯಶ್ರೀ, ರಾಜುತಾಳಿಕೋಟೆ, ಮಾಸ್ಟರ್ ಲಕ್ಷ್ಮಣ್, ಮಾಸ್ಟರ್ ಸಾಯಿಕೃಷ್ಣ ಚಿತ್ರದ ತಾರಾಗಣದಲ್ಲಿದ್ದಾರೆ. ಸಿದ್ದಾರ್ಥ ವಿಪಿನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ