ಎರಡನೇ ಮದುವೆ ವದಂತಿಗೆ ತೆರೆ ಎಳೆದ ನಟಿ ಮೇಘನಾ: ಚಿರು ಫೋಟೊ ಶೇರ್‌ ಮಾಡಿ ಹೇಳಿದ್ದೇನು

Sampriya

ಬುಧವಾರ, 30 ಏಪ್ರಿಲ್ 2025 (13:02 IST)
Photo Courtesy X
ಬೆಂಗಳೂರು: ಎರಡನೇ ಮದುವೆಯ ವದಂತಿ ಹಬ್ಬಿಸಿದವರಿಗೆ ನಟಿ ಮೇಘನಾರಾಜ್‌ ಅವರು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್‌ ಮಾಡುವ ಮೂಲಕ ತೆರೆ ಎಳೆದಿದ್ದಾರೆ.

ನಟಿ ಮೇಘನಾ ರಾಜ್ ಪತಿಯೊಂದಿಗಿನ ಹಳೆಯ ಫೋಟೋಗಳನ್ನು ಶೇರ್ ಮಾಡಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಪ್ರತಿ ಜನ್ಮದಲ್ಲೂ... ಪ್ರತಿ ಜನ್ಮಕ್ಕೂ ಚಿರು ಬೇಕು ಎನ್ನುವ ಮೂಲಕ ಎರಡನೇ ಮದುವೆಯ ಬಗ್ಗೆ ಯೋಚನೆ ಇಲ್ಲ ಎಂಬುದನ್ನು ಸಾರಿ ಹೇಳಿದ್ದಾರೆ. ಹಲವು ವರ್ಷಗಳ ನಂತರ ಮೇಘನಾ ರಾಜ್ ಮಲಯಾಳಂ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕನ್ನಡ ಸಿನಿಮಾಗಳು ಅವರ ಕೈಯಲ್ಲಿವೆ. ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗಲಿದೆ.

ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರು ಪ್ರೀತಿಸಿ  2018ರಲ್ಲಿ ವಿವಾಹ ಆದರು. ಆದರೆ, 2020ರಲ್ಲಿ ಚಿರು ಸರ್ಜಾ ಅವರು ಹೃದಯಾಘಾತದಿಂದ ಮೃತಪಟ್ಟರು. ಆದರೆ, ಅವರ ಜೊತೆಗಿನ ನೆನಪು ಅವರಲ್ಲಿ ಸದಾ ಉಳಿಯುವಂಥದ್ದು. ಇದಕ್ಕೆ ಸಾಕ್ಷಿ ಒದಗಿಸುವ ರೀತಿಯ ಫೋಟೋಗಳು ವೈರಲ್ ಆಗಿವೆ.

ಚಿರಂಜೀವಿ ನಿಧನ ಹೊಂದಿದ ಬಳಿಕ ರಾಯನ್ ಬಂದಿದ್ದಾನೆ. ರಾಯನ್ ಹಾಗೂ ಚಿರು ನಡುವೆ ಸಾಕಷ್ಟು ಹೋಲಿಕೆ ಇದೆ ಎಂದು ಮೇಘನಾ ಅವರು ಅನೇಕ ಬಾರಿ ಹೇಳಿದ್ದು ಇದೆ. ಅವರು ಸದ್ಯಕ್ಕೆ ಎರಡನೇ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ. ಮಗನ ಜೊತೆಯಲ್ಲಿ ಚಿರುವಿನ ನೆನಪಿನಲ್ಲೇ ಬದುಕುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ