ತಿಲಕ್ ಹೀರೋ ಆಗ್ತಿದ್ದಾರೆ...ಅವರು ಯಾವ ಪಾತ್ರದಲ್ಲಿ ಮಿಂಚ್ತಾರೆ ಗೊತ್ತೇ ?

ಬುಧವಾರ, 9 ಏಪ್ರಿಲ್ 2014 (09:25 IST)
PR
ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದಾ ನಟ ತಿಲಕ್ ಹೆಚ್ಚು ಜನರಿಗೆ ಗೊತ್ತಾದರೂ ಎನ್ನುವುದು ಸುಳ್ಳಲ್ಲ. ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂಡ ಬಳಿಕ, ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದರು ಸಹ ಹೆಚ್ಚು ಗಮನ ಕೊಟ್ಟಿದ್ದು ಖಳನಾಯನಾಗಿ ನಟಿಸುವತ್ತ. ಖಳನಟರಾಗಿಯೇ ತಮ್ಮದ್ದೊಂದು ಛಾಪು ಮೂಡಿಸಿದ್ದ ತಿಲಕ್‌, ಈಗ ಮೊದಲ ಬಾರಿಗೆ ಹೀರೋ ಆಗಿದ್ದಾರೆ.ಇದರಿಂದ ಅವರಿಗೆ ತುಂಬಾ ಖುಷಿ ಆಗಿದೆ. ಅವರು ಹೀರೋ ಆಗಿರುವ ಚಿತ್ರದಲ್ಲಿ

ತಿಲಕ್‌ ನಿಷ್ಠಾವಂತ ಪೊಲೀಸ್‌ ಅಧಿಕಾರಿಯಂತೆ. ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತೋಷ ಆಗಿದೆ ತಿಲಕ್ ಗೆ . ಈಗಾಗಲೇ ತಿಲಕ್‌ ಹೊಸ ಚಿತ್ರಕ್ಕೆ ಮುಹೂರ್ತ ನಡೆದಿದ್ದು, ಚಿತ್ರೀಕರಣ ಕೂಡ ಸಾಗಿದೆ. ಆ ಚಿತ್ರಕ್ಕೆ 'ಹೆಚ್‌/34 ಪಲ್ಲವಿ ಟಾಕೀಸ್‌' ಎಂದು ನಾಮಕರಣ ಮಾಡಲಾಗಿದೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸ್ಟೋರಿ.

PR
ತಿಲಕ್‌ ಆ ಕಥೆ ಕೇಳಿ ಥ್ರಿಲ್‌ ಆದರಂತೆ. ಒಳ್ಳೆಯ ಪಾತ್ರದ ಜತೆಯಲ್ಲಿ ಒಂದೊಳ್ಳೆಯ ತಂತ್ರಜ್ಞರ ತಂಡ ಕೂಡಾ ಇದೆ. ಕೆಲ ನೈಜ ಘಟನೆಗಳು ಚಿತ್ರಕ್ಕೆ ಸ್ಫೂರ್ತಿಯಾಗಿವೆ ಹೊರತು, ಯಾವುದೇ ನೈಜ ಘಟನೆ ಆಧರಿಸಿ ಈ ಚಿತ್ರ ಮಾಡುತ್ತಿಲ್ಲ ಎನ್ನುತ್ತಾರೆ ತಿಲಕ್‌.

ನಿರ್ದೇಶಕರು ಸೀನಿ. ಕಥೆ ಮತ್ತು ಚಿತ್ರಕಥೆ ಸಂಪೂರ್ಣವಾಗಿ ನಿರ್ದೇಶಕರದ್ದೆ! , ರವಿಕಿರಣ್‌ ನಿರ್ಮಾಣದ ಚಿತ್ರ ಇದಾಗಿದೆ. ಅಜನೀಶ್‌ ಲೋಕನಾಥ್‌ ಸಂಗೀತವಿದೆ. ಮನೋಹರ್‌ ಜೋಶಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಡ್ಯಾನಿ ಅವರ ಡಿಫ‌ರೆಂಟ್‌ ಸ್ಟಂಟ್‌ ಈ ಚಿತ್ರಕ್ಕಿರಲಿದೆ. ಸುಧಾ ಬೆಳವಾಡಿ, ಪದ್ಮಜಾ ರಾವ್ ರಂತಹ ಹಿರಿಯ ನಟಿಯರು ಇದ್ದಾರೆ. ಆದರೆ ಸದ್ಯಕ್ಕಿನ್ನು ಹೀರೋಯಿನ್ ಆಯ್ಕೆ ಆಗಿಲ್ಲ!

ವೆಬ್ದುನಿಯಾವನ್ನು ಓದಿ